ಶ್ವೇತಭವನದಲ್ಲಿ ಪತ್ತೆಯಾಗಿದ್ದ ಮಾದಕ ವಸ್ತು ಬೈಡನ್ ಅಥವಾ ಅವರ ಪುತ್ರನಿಗೆ ಸೇರಿರಬಹುದು: ಟ್ರಂಪ್ ಆರೋಪ

Update: 2025-03-02 22:36 IST
ಶ್ವೇತಭವನದಲ್ಲಿ ಪತ್ತೆಯಾಗಿದ್ದ ಮಾದಕ ವಸ್ತು ಬೈಡನ್ ಅಥವಾ ಅವರ ಪುತ್ರನಿಗೆ ಸೇರಿರಬಹುದು: ಟ್ರಂಪ್ ಆರೋಪ

ಡೊನಾಲ್ಡ್ ಟ್ರಂಪ್ | PTI

  • whatsapp icon

ವಾಷಿಂಗ್ಟನ್: 2023ರಲ್ಲಿ ಶ್ವೇತಭವನದ ಕಚೇರಿಯ ಲಾಕರ್‍ನಲ್ಲಿ ಕಂಡುಬಂದಿದ್ದ ಮಾದಕ ವಸ್ತು ಕೊಕೇನ್ ಜೋ ಬೈಡನ್ ಅಥವಾ ಅವರ ಪುತ್ರನಿಗೆ ಸೇರಿರುವ ಸಾಧ್ಯತೆಯಿದೆ. ಶ್ವೇತಭವನದಲ್ಲಿ ಕೆಟ್ಟ ಸಂಗತಿಗಳು ನಡೆದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

2023ರಲ್ಲಿ ಬೈಡನ್ ಕುಟುಂಬ ಕ್ಯಾಂಪ್ ಡೇವಿಡ್‍ನಲ್ಲಿ ರಜಾ ದಿನ ಕಳೆದ ಸಂದರ್ಭ ಮಾದಕ ವಸ್ತು ಪತ್ತೆಯಾಗಿತ್ತು. ಇದು ಅಕ್ರಮ ವಸ್ತುವೆಂದು ನಿರ್ಧರಿಸಿದ ಬಳಿಕ 11 ದಿನಗಳ ತನಿಖೆ ನಡೆದಿತ್ತು. ವಿಧಿವಿಜ್ಞಾನ ಪರೀಕ್ಷೆ ನಡೆಸಿ ಬೆರಳಚ್ಚುಗಳನ್ನು ಗುರುತಿಸಿದರೆ ಅಪರಾಧಿಗಳನ್ನು ಪತ್ತೆಹಚ್ಚಬಹುದಿತ್ತು. ಆದರೆ ಸಾಕ್ಷ್ಯಾಧಾರಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿ ಹಾಕಿರುವಂತೆ ಕಾಣುತ್ತಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಶ್ವೇತಭವನದಲ್ಲಿ ಕೊಕೇನ್ ಪತ್ತೆಯಾಗಿರುವುದು ಭಯಾನಕ ವಿಷಯವಾಗಿದೆ. ಕೊಕೇನ್ ಪ್ಯಾಕೇಟನ್ನು ಪತ್ತೆಹಚ್ಚಿದ ವಿಧಿವಿಜ್ಞಾನ ತಜ್ಞರು ನೀಡಿದ ವರದಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವನ್ನು ಸೂಚಿಸುತ್ತದೆ. ಇದೀಗ ಈ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಿ ವಾಸ್ತವಾಂಶವನ್ನು ಬಹಿರಂಗರಪಡಿಸಲು ತನ್ನ ಆಡಳಿತ ನಿರ್ಧರಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News