ಸಾವಿರಕ್ಕೂ ಅಧಿಕ ಕೈದಿಗಳ ಅವಧಿಗೂ ಮುನ್ನ ಬಿಡುಗಡೆಗೆ ಬ್ರಿಟನ್ ನಿರ್ಧಾರ
Update: 2024-10-22 16:59 GMT
ಲಂಡನ್ : ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳು ಇರುವುದರಿಂದ ಎರಡನೇ ಹಂತದಲ್ಲಿ ಮತ್ತೆ 1000ಕ್ಕೂ ಅಧಿಕ ಕೈದಿಗಳನ್ನು ಅವರ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಬ್ರಿಟನ್ ಸರಕಾರ ಮಂಗಳವಾರ ಹೇಳಿದೆ.
ಸೆಪ್ಟಂಬರ್ ಮೊದಲ ವಾರದಲ್ಲಿ 1,700 ಕೈದಿಗಳನ್ನು ಅವಧಿಗೂ ಮುನ್ನ ಬಿಡುಗಡೆಗೊಳಿಸಲಾಗಿತ್ತು. ಆರಂಭಿಕ ಬಿಡುಗಡೆ ಯೋಜನೆ ಎಂಬ ಹೆಸರಿನ ನೀತಿಯಡಿ ಕೆಲವು ಷರತ್ತುಗಳನ್ನು ಅನುಸರಿಸಿ, ಅಹಿಂಸಾತ್ಮಕ ಅಪರಾಧಿಗಳು ಅವರ ಶಿಕ್ಷೆಯ 40%ದಷ್ಟು ಅವಧಿಯನ್ನು ಪೂರೈಸಿದರೆ ಬಿಡುಗಡೆಗೊಳಿಸಲಾಗುತ್ತಿದೆ. ಈ ಹಿಂದಿನ ನೀತಿ ಪ್ರಕಾರ ಶಿಕ್ಷೆಯ 50%ದಷ್ಟು ಅವಧಿ ಪೂರೈಸಿದ ಕೈದಿಗಳ ಬಿಡುಗಡೆಗೆ ಅವಕಾಶವಿತ್ತು.