ಭಾರತೀಯ ವೃತ್ತಿಪರರಿಗೆ 3000 ವೀಸಾ ಘೋಷಿಸಿದ ಬ್ರಿಟನ್
Update: 2024-02-20 16:52 GMT
ಲಂಡನ್ : ಬ್ರಿಟನ್‍ನಲ್ಲಿ 2 ವರ್ಷ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು ಬಯಸುವ ಭಾರತದ ಪ್ರಜೆಗಳಿಗೆ ಬ್ರಿಟನ್ ಭರ್ಜರಿ ಅವಕಾಶ ಒದಗಿಸಿದೆ. `ಇಂಡಿಯಾ ಯಂಗ್ ಪ್ರೊಫೆಷನಲ್' ಯೋಜನೆಯಡಿ ಭಾರತೀಯರಿಗೆ 3000 ವೀಸಾವನ್ನು ಒದಗಿಸುವುದಾಗಿ ಬ್ರಿಟನ್ ಸರಕಾರ ಘೋಷಿಸಿದೆ.
ಯೋಜನೆಯಡಿ 18ರಿಂದ 30 ವರ್ಷದೊಳಗಿನ ಭಾರತೀಯ ಪ್ರಜೆಗಳು ಬ್ರಿಟನ್‍ನಲ್ಲಿ ಕೆಲಸ ಮಾಡಲು 3,000 ವೀಸಾಗಳನ್ನು ಒದಗಿಸಲಾಗುವುದು. ಫೆಬ್ರವರಿ 20ರಿಂದ 22ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ರಿಟನ್‍ನಲ್ಲಿ 2 ವರ್ಷ ನೆಲೆಸಲು, ಕೆಲಸ ಮಾಡಲು ಅಥವಾ ಅಧ್ಯಯನ ನಡೆಸಲು ಬಯಸುವ ಭಾರತೀಯ ಪದವೀಧರರು ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದು' ಎಂದು ಪ್ರಕಟಣೆ ತಿಳಿಸಿದೆ.