ಕೆನಡಾ: ಲಿಬರಲ್ ಪಕ್ಷದ ನಾಯಕತ್ವ ರೇಸ್‌ನಿಂದ ಚಂದ್ರ ಆರ್ಯ ಹೊರಕ್ಕೆ

Update: 2025-01-27 21:50 IST
Chandra Arya

ಚಂದ್ರ ಆರ್ಯ | PC : NDTV 

  • whatsapp icon

ಟೊರಂಟೊ: ಕೆನಡಾದ ಆಡಳಿತಾರೂಢ ಲಿಬರಲ್ ಪಾರ್ಟಿಯ ಮುಂದಿನ ನಾಯಕರನ್ನು ಆಯ್ಕೆ ಮಾಡುವ ರೇಸ್ನಲ್ಲಿ ಭಾರತೀಯ ಕೆನಡಿಯನ್ ಸಂಸದ ಚಂದ್ರ ಆರ್ಯ ಭಾಗವಹಿಸುವುದನ್ನು ನಿಷೇಧಿಸಲಾಗಿದೆ.

ಪಕ್ಷ ಈ ಬಗ್ಗೆ ಮಾಹಿತಿ ನೀಡಿದೆ. ಈ ನಿರ್ಧಾರವು ನಾಯಕತ್ವ ಓಟದ ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಮೂರು ಬಾರಿಯ ಸಂಸದ ಆರ್ಯ ಪ್ರತಿಕ್ರಿಯಿಸಿದ್ದಾರೆ. ಈ ನಿರ್ಧಾರಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ. ಆದರೆ ಪಕ್ಷದ ನಿಯಮಗಳ ಪ್ರಕಾರ `ಈ ಹಿಂದೆ ನೀಡಿದ್ದ ಸಾರ್ವಜನಿಕ ಹೇಳಿಕೆಗಳು, ಹಿಂದಿನ ಅನುಚಿತ ನಡವಳಿಕೆ, ಪ್ರಜಾಪ್ರಭುತ್ವದ ಬದ್ಧತೆಯ ಕೊರತೆ' ಇದ್ದರೆ ನಾಯಕತ್ವಕ್ಕೆ ಅನರ್ಹಗೊಳಿಸಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News