ಕೆನಡಾ | ಭಾರತೀಯ ಕಾನ್ಸುಲರ್ ಶಿಬಿರಕ್ಕೆ ಖಾಲಿಸ್ತಾನ್ ಗುಂಪಿನ ಅಡ್ಡಿ

Update: 2024-12-01 17:22 GMT

PC : PTI

 

ಒಟ್ಟಾವ : ಕೆನಡಾದ ಗ್ರೇಟರ್ ಟೊರಂಟೊ ಪ್ರದೇಶದಲ್ಲಿರುವ ಹಿಂದು ದೇವಸ್ಥಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಭಾರತೀಯ ಕಾನ್ಸುಲರ್ ಶಿಬಿರಕ್ಕೆ ಖಾಲಿಸ್ತಾನ್ ಪರ ಗುಂಪೊಂದು ಅಡ್ಡಿಪಡಿಸಲು ಪ್ರಯತ್ನಿಸಿದೆ ಎಂದು ಸ್ಥಳೀಯ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಪ್ರಾರ್ಥನಾ ಸ್ಥಳಗಳ ಹೊರಗೆ ಪ್ರತಿಭಟನೆ ಅಥವಾ ಗುಂಪು ಸೇರುವುದನ್ನು ನಿಷೇಧಿಸಿ ನ್ಯಾಯಾಲಯ ಆದೇಶ ಜಾರಿಗೊಳಿಸಿದ ಹೊರತಾಗಿಯೂ ಖಾಲಿಸ್ತಾನ್ ಪರ ಗುಂಪು ಪ್ರತಿಭಟನೆ ನಡೆಸಿದೆ. ಖಾಲಿಸ್ತಾನ್ ಗುಂಪಿನ ಬೆದರಿಕೆಯ ನಡುವೆಯೂ ಸ್ಕಾರ್‍ಬರೋ ನಗರದಲ್ಲಿರುವ ಲಕ್ಷ್ಮೀನಾರಾಯಣ ಮಂದಿರದ ಆವರಣದಲ್ಲಿ ಕಾನ್ಸುಲರ್ ಶಿಬಿರ ಯಶಸ್ವಿಯಾಗಿ ನಡೆದಿದೆ.

ದೇವಸ್ಥಾನದ ಹೊರಗೆ ಖಾಲಿಸ್ತಾನ್ ಗುಂಪು ಭಾರತ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.

ಇಂತಹ ಪ್ರತಿಭಟನೆ ನಡೆಸುವ ಮೂಲಕ ಖಾಲಿಸ್ತಾನ್ ಬೆಂಬಲಿಗರು ಭಾರತ ಮತ್ತು ಕೆನಡಾ ನಡುವಿನ ಸಂಬಂಧವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾರತೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News