ದೀಪಾವಳಿ ಕಾರ್ಯಕ್ರಮ ರದ್ದುಗೊಳಿಸಿದ ಕೆನಡಾದ ವಿರೋಧ ಪಕ್ಷದ ನಾಯಕ

Update: 2024-10-30 17:13 GMT

ಪಿಯರೆ ಪೊಯಿಲಿವ್ರೆ | PC : X/@PierrePoilievre

ಒಟ್ಟಾವ: ಭಾರತದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಕೆನಡಾದ ವಿರೋಧ ಪಕ್ಷದ ನಾಯಕರ ಕಚೇರಿಯು ಭಾರತೀಯ-ಕೆನಡಿಯನ್ ಸಮುದಾಯಕ್ಕೆ ಸಂಸತ್ ಭವನದಲ್ಲಿ ವಾರ್ಷಿಕ ದೀಪಾವಳಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಕ್ಟೋಬರ್ 30ರಂದು (ಬುಧವಾರ) ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಕ್ಕೆ ಯಾವುದೇ ಕಾರಣವನ್ನು ಒದಗಿಸಲಾಗಿಲ್ಲ ಎಂದು ಕಾರ್ಯಕ್ರಮದ ಆಯೋಜಕರಾದ `ದಿ ಇಂಡಿಯನ್ ಡಯಾಸ್ಪೊರ ಗ್ರೂಫ್ ದಿ ಓವರ್‍ಸೀಸ್ ಫ್ರೆಂಡ್ಸ್ ಆಫ್ ಇಂಡಿಯಾ ಕೆನಡಾ(ಒಎಫ್‍ಐಸಿ) ಹೇಳಿದೆ.

`ಕಳೆದ 23 ವರ್ಷದಿಂದ ಆಯೋಜಿಸಲಾಗುತ್ತಿದ್ದ ಕಾರ್ಯಕ್ರಮದಲ್ಲಿ ಬೌದ್ಧರು, ಸಿಖ್, ಜೈನ್, ಹಿಂದುಗಳು ಪಾಲ್ಗೊಳ್ಳುತ್ತಿದ್ದರು. ಆದರೆ ಕೆನಡಾ ಮತ್ತು ಭಾರತದ ನಡುವಿನ ಪ್ರಸ್ತುತ ರಾಜತಾಂತ್ರಿಕ ಪರಿಸ್ಥಿತಿಯಿಂದ ಪ್ರೇರೇಪಿಸಲ್ಪಟ್ಟ ಈ ಘಟನೆಯಿಂದ ನಮಗೆ ಅನ್ಯಾಯವಾಗಿದ್ದು ನಮ್ಮನ್ನು ಪ್ರತ್ಯೇಕಿಸಿರುವಂತೆ ಭಾಸವಾಗುತ್ತಿದೆ. ವಿರೋಧ ಪಕ್ಷದ ಮುಖಂಡ ಪಿಯರೆ ಪೊಯಿಲಿವ್ರೆ ಅವರು ಜನಾಂಗೀಯ ಪಕ್ಷಪಾತ' ತೋರುತ್ತಿದ್ದಾರೆ' ಎಂದು ಒಎಫ್‍ಐಸಿ ಅಧ್ಯಕ್ಷ ಶಿವ್ ಭಾಸ್ಕರ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News