ಅರುಣಾಚಲ ಪ್ರದೇಶದ ಪರ್ವತಕ್ಕೆ ದಲಾಯಿ ಲಾಮಾ ಹೆಸರು | ಚೀನಾ ಆಕ್ಷೇಪ

Update: 2024-09-27 17:01 GMT

PC :X/@PemaKhandu

ಬೀಜಿಂಗ್ : ಅರುಣಾಚಲ ಪ್ರದೇಶದ ಪರ್ವತವೊಂದನ್ನು ಏರಿದ ಭಾರತದ ಪರ್ವತಾರೋಹಿಗಳ ತಂಡವು ಪರ್ವತಕ್ಕೆ 6ನೇ ದಲಾಯಿ ಲಾಮಾರ ಹೆಸರನ್ನು ನಾಮಕರಣ ಮಾಡಿರುವುದನ್ನು ಚೀನಾ ಬಲವಾಗಿ ಆಕ್ಷೇಪಿಸಿದ್ದು ಆ ಪ್ರದೇಶದ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಪುನರುಚ್ಚರಿಸಿದೆ.

ಅರುಣಾಚಲ ಪ್ರದೇಶದಲ್ಲಿರುವ 20,942 ಅಡಿ ಎತ್ತರದ ಪರ್ವತವನ್ನು ಯಶಸ್ವಿಯಾಗಿ ಏರಿದ ಪ್ರಥಮ ತಂಡ ಎನಿಸಿರುವ `ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ರಾಷ್ಟ್ರೀಯ ಸಂಸ್ಥೆ'ಯ ತಂಡವು ಈ ಪರ್ವತಕ್ಕೆ 6ನೇ ಲಾಮಾ ತ್ಸಾಂಗ್ಯಾಂಗ್ ಗ್ಯಾಟ್ಸೋ ಅವರ ಹೆಸರನ್ನು ನಾಮಕರಣ ಮಾಡಿತ್ತು. 6ನೇ ದಲಾಯಿ ಲಾಮಾ ಅವರ ಕಾಲಾತೀತ ಪಾಂಡಿತ್ಯ ಮತ್ತು ಮೊನ್ಬಾ ಸಮುದಾಯಕ್ಕೆ ಹಾಗೂ ಇತರ ಸಮುದಾಯಗಳಿಗೆ ಅವರು ನೀಡಿದ ಕೊಡುಗೆಗೆ ಸಲ್ಲಿಸುವ ಗೌರವವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ` ಝಂಗ್ನಾನ್ ಪ್ರದೇಶ ಚೀನಾದ ಪ್ರದೇಶವಾಗಿದೆ. ಇಲ್ಲಿ ತಥಾಕಥಿತ ಅರುಣಾಚಲ ಪ್ರದೇಶವನ್ನು ಸ್ಥಾಪಿಸುವುದು ಭಾರತದ ಕಾನೂನುಬಾಹಿರ ಕ್ರಮವಾಗಿದ್ದು ಇದು ಅನೂರ್ಜಿತವಾಗಿದೆ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News