ಚೀನಾ: ಅತ್ಯಾಧುನಿಕ ಪರಮಾಣು ರಿಯಾಕ್ಟರ್ ಕಾರ್ಯಾರಂಭ

Update: 2023-12-08 17:34 GMT

Photo: Canva

ಬೀಜಿಂಗ್: ಚೀನಾ ಹೊಸ ಪೀಳಿಗೆಯ ಪರಮಾಣು ರಿಯಾಕ್ಟರ್ ನಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ್ದು ಈ ನಾಲ್ಕನೇ ಪೀಳಿಗೆಯ ರಿಯಾಕ್ಟರ್ ವಿಶ್ವದ ಮೊದಲ ಅತ್ಯಾಧುನಿಕ ಪರಮಾಣು ರಿಯಾಕ್ಟರ್ ಆಗಿದೆ ಎಂದು ಸರಕಾರಿ ಸ್ವಾಮ್ಯದ `ಕ್ಸಿನ್‍ಹುವಾ' ಸುದ್ಧಿಸಂಸ್ಥೆ ವರದಿ ಮಾಡಿದೆ.

ಈ ಹಿಂದಿನ ರಿಯಾಕ್ಟರ್ ಗಳಿಗೆ ಹೋಲಿಸಿದರೆ, ಚೀನಾದ ಉತ್ತರ ಶಾಂಡಾಂಗ್ ಪ್ರಾಂತದಲ್ಲಿನ ಶಿಡೋವನ್ ಸ್ಥಾವರದ ವಿನ್ಯಾಸವನ್ನು ಇಂಧನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಮತ್ತು ಅದರ ವೆಚ್ಚ, ಸುರಕ್ಷತೆ ಮತ್ತು ಪರಿಸರದ ಹೆಜ್ಜೆಗುರುತನ್ನು ಸುಧಾರಿಸುವ ರೀತಿಯಲ್ಲಿ ರೂಪಿಸಲಾಗಿದೆ. ಇಂಗಾಲ ಹೊರಸೂಸುವಿಕೆ ಗುರಿಯನ್ನು ಪೂರೈಸಲು ಇಲ್ಲಿ ಆದ್ಯತೆ ನೀಡಲಾಗಿದೆ.

200 ಮೆಗಾವ್ಯಾಟ್ ಎಚ್‍ಟಿಜಿಸಿಆರ್ (ಹೈ ಟೆಂಪರೇಚರ್, ಗ್ಯಾಸ್ ಕೂಲ್ಡ್) ರಿಯಾಕ್ಟರ್ ಅನ್ನು ಸರಕಾರಿ ಸ್ವಾಮ್ಯದ ತ್ಸಿಂಗ್‍ಹುವಾ ವಿವಿ ಮತ್ತು ಚೀನಾ ನ್ಯಾಷನಲ್ ನ್ಯೂಕ್ಲಿಯರ್ ಕಾರ್ಪೋರೇಶನ್‍ನ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಇದು ಮಾಡ್ಯುಲರ್ ವಿನ್ಯಾಸವನ್ನು ಬಳಸುತ್ತದೆ ಎಂದು ವರದಿ ಹೇಳಿದೆ. ಇವುಗಳನ್ನು ದೂರದ ಸ್ಥಳಗಳಲ್ಲೂ ನಿರ್ವಹಿಸಬಹುದು ಮತ್ತು ಸಾಂಪ್ರದಾಯಕವಾಗಿ ವೆಚ್ಚ ತಗ್ಗಿಸಲು ಕಷ್ಟವಾಗುವ ಬೃಹತ್ ಉದ್ಯಮ ವಲಯಕ್ಕೆ ಶಕ್ತಿ ನೀಡಬಹುದು. ಆದರೆ ಇವು ತುಂಬಾ ವೆಚ್ಚದಾಯಕ ಎಂಬ ಟೀಕೆಯೂ ವ್ಯಕ್ತವಾಗಿದೆ. 2035ರ ವೇಳೆಗೆ ಪರಮಾಣು ಶಕ್ತಿಯಿಂದ 10%ದಷ್ಟು ವಿದ್ಯುತ್ ಅನ್ನು, 2060ರ ವೇಳೆಗೆ 18%ದಷ್ಟು ವಿದ್ಯುತ್ ಉತ್ಪಾದಿಸುವ ಗುರಿಯನ್ನು ಚೀನಾ ಹೊಂದಿದೆ.

ಆದರೆ ಈ ವರ್ಷದ ಸೆಪ್ಟಂಬರ್ ನಲ್ಲಿ 58 ಗಿಗಾವ್ಯಾಟ್ ಸಾಮರ್ಥ್ಯದ ಪರಮಾಣು ಸ್ಥಾವರ ನಿರ್ಮಿಸುವ ಗುರಿ ಸಾಧಿಸಲು ವಿಫಲವಾಗಿದೆ. ದುಬೈಯಲ್ಲಿ ನಡೆದ ಸಿಒಪಿ28 ಹವಾಮಾನ ಶೃಂಗಸಭೆಯಲ್ಲಿ 2050ರ ವೇಳೆಗೆ ಪರಮಾಣು ಶಕ್ತಿ ಸಾಮರ್ಥ್ಯವನ್ನು ಮೂರುಪಟ್ಟು ಹೆಚ್ಚಿಸುವ 20 ದೇಶಗಳ ಘೋಷಣೆಗೆ ಚೀನಾ ಸಹಿ ಹಾಕಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News