ಚೀನಾದ ಪರಮಾಣು ಸಬ್ಮೆರಿನ್ ದುರಂತ: 55 ಯೋಧರ ಮೃತ್ಯು

Update: 2023-10-04 17:09 GMT

Photo:  NDTV 

ಬೀಜಿಂಗ್: ಚೀನಾದ ಪರಮಾಣುಶಕ್ತ ಸಬ್ಮೆರಿನ್ನಲ್ಲಿ ಸಂಭವಿಸಿದ ಅವಘಡದಿಂದಾಗಿ ಸಬ್ಮೆರಿನ್ ನ ಕ್ಯಾಪ್ಟನ್, 21 ಅಧಿಕಾರಿಗಳು ಸೇರಿದಂತೆ 55 ಯೋಧರು ಮೃತಪಟ್ಟಿರುವುದಾಗಿ ಬ್ರಿಟನ್ ನ ಗುಪ್ತಚರ ಇಲಾಖೆಯ ಸೋರಿಕೆಯಾದ ವರದಿಯನ್ನು ಆಧರಿಸಿ `ದಿ ಟೈಮ್ಸ್' ವರದಿ ಮಾಡಿದೆ.

ಹಳದಿ ಸಮುದ್ರದಲ್ಲಿ ಈ ದುರಂತ ನಡೆದಿದ್ದು ಸಬ್ಮೆರಿನ್ನಲ್ಲಿ ತಾಂತ್ರಿಕ ವೈಫಲ್ಯದಿಂದಾಗಿ ಆಕ್ಸಿಜನ್ ಕೊರತೆಯಾಗಿ ಸಬ್ಮೆರಿನ್ ನಲ್ಲಿದ್ದ 55 ಮಂದಿ ಉಸಿರುಗಟ್ಟಿ ಮೃತರಾಗಿದ್ದಾರೆ. ಚೀನೀ ನೌಕಾಸೇನೆಯ 093-417 ಸಬ್ಮೆರಿನ್ ಸಮುದ್ರದ ಆಳದಲ್ಲಿ ಮುಳುಗಿದೆ ಎಂದು ವರದಿ ತಿಳಿಸಿದೆ. ಆದರೆ ಇದನ್ನು ಚೀನಾ ತಿರಸ್ಕರಿಸಿದೆ.

ಚೀನಾದ ರಕ್ಷಣಾ ಪಡೆ ಸಮುದ್ರದ ಆಳದಲ್ಲಿ ಸ್ಥಾಪಿಸಿದ `ಸೀ ಬೆಡ್ ಡಿಫೆನ್ಸ್'(ಸಮುದ್ರದ ಆಳದ ರಕ್ಷಣಾ ವ್ಯವಸ್ಥೆ)ನಲ್ಲಿ ಈ ಸಬ್ಮೆರಿನ್ ಸಿಕ್ಕಿಹಾಕಿಕೊಂಡಿದ್ದು ಇದರಿಂದ ಸಬ್ಮೆರನ್ ನಲ್ಲಿ ತಾಂತ್ರಿಕ ವೈಫಲ್ಯ ಉಂಟಾಗಿದೆ. ಅಮೆರಿಕ ಹಾಗೂ ಬ್ರಿಟನ್ನ ಸಬ್ಮೆರಿನ್ ಗಳಿಗೆ ತಡೆಯೊಡ್ಡಲು ಚೀನಾದ ಸೇನೆ ನಿರ್ಮಿಸಿದ್ದ `ಬಲೆ'ಯಲ್ಲಿ ಅವರದ್ದೇ ಸಬ್ಮೆರಿನ್ ಸಿಲುಕಿಕೊಂಡಿದೆ ಎಂದು ಬ್ರಿಟನ್ ಗುಪ್ತಚರ ಇಲಾಖೆ ಆಗಸ್ಟ್ 21ರಂದು ಸರಕಾರಕ್ಕೆ ನೀಡಿದ್ದ ವರದಿ ಸೋರಿಕೆಯಾಗಿ ಈ ಮಾಹಿತಿ ಲಭಿಸಿದೆ ಎಂದು ವರದಿಯಾಗಿದೆ.

ಸಬ್ಮೆರಿನ್ ದುರಂತದ ಬಗ್ಗೆ ಒಂದು ತಿಂಗಳ ಹಿಂದೆಯೇ ಸಾಮಾಜಿಕ ಮಾಧ್ಯಮದಲ್ಲಿ ವದಂತಿ ಪ್ರಸಾರವಾಗಿದೆ. ಆದರೆ ಚೀನಾ ಇದನ್ನು ನಿರಾಕರಿಸಿತ್ತು. ಚೀನಾದ ಬಳಿ ದಾಳಿ ಮಾಡುವ ಸಾಮರ್ಥ್ಯವುಳ್ಳ 93 ಸಬ್ಮೆರಿನ್ ಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News