ಚೀನಾ | ಕೋವಿಡ್ ಸೋಂಕಿನ ವರದಿಗಾಗಿ ಬಂಧನದಲ್ಲಿದ್ದ ಪತ್ರಕರ್ತೆ ಬಿಡುಗಡೆ

Update: 2024-05-23 17:02 GMT

ಚೀನಾದ ಪತ್ರಕರ್ತೆ ಝಾಂಗ್ ಝಾನ್ರ | PC : NDTV 
 

ಶಾಂಘೈ : ಚೀನಾ ಸರಕಾರ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಮಾಡಿದ್ದಕ್ಕೆ 2020ರಲ್ಲಿ ಬಂಧಿಸಲ್ಪಟ್ಟಿದ್ದ ಚೀನಾದ ಪತ್ರಕರ್ತೆ ಝಾಂಗ್ ಝಾನ್ರನ್ನು 4 ವರ್ಷದ ಸೆರೆವಾಸದ ಬಳಿಕ ಬಿಡುಗಡೆಗೊಳಿಸಿರುವುದಾಗಿ ವರದಿಯಾಗಿದೆ.

ಆದರೆ ಝಾಂಗ್ ಝಾನ್ ಈಗಲೂ ಕಣ್ಗಾವಲಿನಲ್ಲಿದ್ದಾರೆ ಮತ್ತು ಅವರ ಸ್ವಾತಂತ್ರ್ಯ ಸೀಮಿತವಾಗಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. 2020ರ ಫೆಬ್ರವರಿಯಲ್ಲಿ ಕೋವಿಡ್-19 ಸೋಂಕಿನ `ಹಾಟ್ಸ್ಪಾಟ್' ಎಂದು ಗುರುತಿಸಿಕೊಂಡಿದ್ದ ವುಹಾನ್ಗೆ ಪ್ರಯಾಣಿಸಿದ್ದ ಝಾಂಗ್, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. `ಸರಕಾರದ ಅಧಿಕಾರಿಗಳೊಂದಿಗೆ ಜಗಳವಾಡಿ ಸಮಸ್ಯೆಗೆ ಪ್ರಚೋದನೆ ನೀಡಿದ' ಆರೋಪದಲ್ಲಿ ಝಾಂಗ್ರನ್ನು 2020ರ ಮೇ ತಿಂಗಳಲ್ಲಿ ಬಂಧಿಸಿ 4 ವರ್ಷ ಸೆರೆವಾಸ ವಿಧಿಸಲಾಗಿತ್ತು.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News