ಅಮೆರಿಕದ ಕೋರ್ಟ್‌ ನ ವೈರ್‌ಟ್ಯಾಪ್ ವ್ಯವಸ್ಥೆಯ ಮೇಲೆ ಚೀನಾ ಹ್ಯಾಕರ್‍ ಗಳ ದಾಳಿ : ವರದಿ

Update: 2024-10-06 17:35 GMT

ಸಾಂದರ್ಭಿಕ ಚಿತ್ರ | PC : AP

ನ್ಯೂಯಾರ್ಕ್ : ಚೀನಾದ ಹ್ಯಾಕರ್‍ ಗಳು ಅಮೆರಿಕದ ಕೋರ್ಟ್‌ ನ ವೈರ್‌ಟ್ಯಾಪ್ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿರುವುದಾಗಿ ವಾಲ್‍ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಅಮೆರಿಕದ ಬ್ರಾಡ್‍ಬ್ಯಾಂಡ್ ಪೂರೈಕೆದಾರರ ನೆಟ್‍ವರ್ಕ್‍ಗಳನ್ನು ಪ್ರವೇಶಿಸಿದ ಚೀನಾದ ಹ್ಯಾಕರ್‍ ಗಳು ಫೆಡರಲ್ ಸರಕಾರವು ನ್ಯಾಯಾಲಯದ ಅಧಿಕೃತ ವೈರ್‍ಟ್ಯಾಪಿಂಗ್‍ಗಾಗಿ ಬಳಸುವ ವ್ಯವಸ್ಥೆಗಳಿಂದ ಮಾಹಿತಿಗಳನ್ನು ಪಡೆದಿದ್ದಾರೆ ಎಂದು ವರದಿ ಹೇಳಿದೆ.

ಫೋನ್‍ಗಳ ನಡುವೆ ಮಾಹಿತಿಯನ್ನು ಸಾಗಿಸುವ ಸಕ್ರ್ಯೂಟ್‍ಗೆ ಆಲಿಸುವ ಸಾಧನವನ್ನು ಸಂಪರ್ಕಿಸಲು ವೈರ್‍ಟ್ಯಾಪಿಂಗ್ ವ್ಯವಸ್ಥೆ ಬಳಸಲಾಗುತ್ತದೆ. ವೆರಿಝಾನ್ ಕಮ್ಯುನಿಕೇಷನ್ಸ್, ಲ್ಯೂಮೆನ್ ಟೆಕ್ನಾಲಜೀಸ್ ಸೇರಿದಂತೆ ಹಲವು ಕಂಪೆನಿಗಳ ನೆಟ್‍ವರ್ಕ್ ಗಳನ್ನು ಹ್ಯಾಕ್ ಮಾಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ ಎಂದು ವರದಿ ಹೇಳಿದೆ.

ಅಮೆರಿಕದ ಕೋರಿಕೆ(ನ್ಯಾಯಾಲಯದಿಂದ ಅಧಿಕೃತಗೊಳಿಸಿದ)ಯಂತೆ ಸಂವಹನ ದತ್ತಾಂಶ ಒದಗಿಸಲು ಕಂಪೆನಿಗಳು ಬಳಸುವ ನೆಟ್‍ವರ್ಕ್ ಮೂಲಸೌಕರ್ಯಕ್ಕೆ ಹ್ಯಾಕರ್‍ ಗಳು ಹಲವು ತಿಂಗಳುಗಳಿಂದ ಪ್ರವೇಶಿಸಿರಬಹುದು. ಹ್ಯಾಕರ್‍ ಗಳು ಇಂಟರ್ನೆಟ್ ಟ್ರಾಫಿಕ್‍ನ ಇತರ ಭಾಗಗಳನ್ನು ಸಹ ಪ್ರವೇಶಿಸಿದ್ದಾರೆ ಎಂದು ವಾಲ್‍ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯ `ವರದಿಯಲ್ಲಿ ಉಲ್ಲೇಖಿಸಿರುವ ಸೈಬರ್ ದಾಳಿಯ ಬಗ್ಗೆ ತನಗೆ ಮಾಹಿತಿಯಿಲ್ಲ. ಆದರೆ ಚೀನಾದ ಪ್ರತಿಷ್ಠೆಗೆ ಮಸಿ ಬಳಿಯಲು ಅಮೆರಿಕ ಈ ಹಿಂದೆಯೂ ಇಂತಹ ಕಪೋಲ ಕಲ್ಪಿತ ಹೇಳಿಕೆಯನ್ನು ನೀಡಿದೆ' ಎಂದು ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News