ಇಸ್ರೇಲ್ ದಾಳಿಯ ಭೀತಿ | ಪ್ರಮುಖ ತೈಲ ಟರ್ಮಿನಲ್‍ಗೆ ಇರಾನ್ ತೈಲ ಸಚಿವರ ಭೇಟಿ

Update: 2024-10-06 15:25 GMT

ಸಾಂದರ್ಭಿಕ ಚಿತ್ರ | PC : PTi

ಟೆಹ್ರಾನ್ : ಇರಾನ್‍ನ ಅತೀ ದೊಡ್ಡ ತೈಲ ಟರ್ಮಿನಲ್ ಇರುವ ಪರ್ಶಿಯನ್ ಕೊಲ್ಲಿಯ ಖಾರ್ಗ್ ದ್ವೀಪಕ್ಕೆ ತೈಲ ಸಚಿವ ಮೊಹ್ಸಿನ್ ಪಕ್ನೆಜಾದ್ ರವಿವಾರ ಭೇಟಿ ನೀಡಿರುವುದಾಗಿ ತೈಲ ಸಚಿವಾಲಯದ `ಶನಾ' ವೆಬ್‍ಸೈಟ್ ವರದಿ ಮಾಡಿದೆ.

ಖಾರ್ಗ್ ತೈಲ ಟರ್ಮಿನಲ್‍ಗೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಚಿವರು ರವಿವಾರ ಬೆಳಿಗ್ಗೆ ತೈಲ ಟರ್ಮಿನಲ್‍ಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಜತೆ ಸಮಾಲೋಚನೆ ನಡೆಸಿರುವುದಾಗಿ ವರದಿ ಹೇಳಿದೆ.

ಖಾರ್ಗ್ ದ್ವೀಪದ ತೈಲ ಟರ್ಮಿನಲ್ 23 ದಶಲಕ್ಷ ಬ್ಯಾರೆಲ್‍ಗಳಷ್ಟು ಕಚ್ಛಾ ತೈಲ ಸಂಗ್ರಹಿಸುವ ಸಾಮಥ್ರ್ಯವನ್ನು ಹೊಂದಿದೆ. ಇರಾನ್‍ನ ತೈಲಗಳ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ಮಾನ್ಯ ಮಾಡದ ಚೀನಾ 2024ರ ಪ್ರಥಮಾರ್ಧದಲ್ಲಿ ಇರಾನ್‍ನಿಂದ ಪ್ರತೀ ದಿನ ಸುಮಾರು 1.4 ದಶಲಕ್ಷ ಬ್ಯಾರೆಲ್ ಕಚ್ಛಾ ತೈಲವನ್ನು ಆಮದು ಮಾಡಿಕೊಂಡಿದ್ದು ಇರಾನ್‍ನ ಪ್ರಮುಖ ಗ್ರಾಹಕನಾಗಿದೆ.

ಕಳೆದ ವಾರ ಇರಾನ್ ನಡೆಸಿರುವ ಕ್ಷಿಪಣಿ ದಾಳಿಗೆ ಇಸ್ರೇಲ್ ಸರಿಯಾದ ಸಮಯದಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರರು ಶನಿವಾರ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News