ಗಾಝಾ | ಜಬಾಲಿಯಾ ಸುತ್ತುವರಿದ ಇಸ್ರೇಲ್ ಸೇನೆ

Update: 2024-10-06 15:27 GMT

ಸಾಂದರ್ಭಿಕ ಚಿತ್ರ (PTI)

ಗಾಝಾ : ಗಾಝಾದಲ್ಲಿ ಸುಮಾರು 1 ವರ್ಷದಿಂದ ಮುಂದುವರಿದಿರುವ ದಾಳಿ ಮತ್ತು ಹೋರಾಟದ ಹೊರತಾಗಿಯೂ ಹಮಾಸ್ ಮರು ಸಂಘಟನೆಗೊಳ್ಳುತ್ತಿರುವ ಸೂಚನೆಗಳ ಹಿನ್ನೆಲೆಯಲ್ಲಿ ಉತ್ತರ ಗಾಝಾದ ಜಬಾಲಿಯಾ ಪ್ರದೇಶವನ್ನು ತನ್ನ ಪಡೆಗಳು ಸುತ್ತುವರಿದಿರುವುದಾಗಿ ಇಸ್ರೇಲ್ ಸೇನೆ ರವಿವಾರ ಹೇಳಿದೆ.

401ನೇ ಬ್ರಿಗೇಡ್ ಮತ್ತು 460ನೇ ಬ್ರಿಗೇಡ್‍ನ ತುಕಡಿಗಳು ಪ್ರದೇಶವನ್ನು ಯಶಸ್ವಿಯಾಗಿ ಸುತ್ತುವರಿದಿದ್ದು ಈಗ ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ಜಬಾಲಿಯಾ ಪ್ರದೇಶದಲ್ಲಿ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಪುನರ್ನಿಮಿಸಲು ಹಮಾಸ್ ಪ್ರಯತ್ನಿಸುತ್ತಿದೆ ಎಂಬ ಗುಪ್ತಚರ ಮಾಹಿತಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಗೂ ಮುನ್ನ ಮತ್ತು ಕಾರ್ಯಾಚರಣೆ ವೇಳೆ ಭೂದಾಳಿ ತುಕಡಿಗೆ ನೆರವಾಗಲು ವಾಯುಪಡೆ ಶಸ್ತ್ರಾಸ್ತ್ರ ಸಂಗ್ರಹಣಾ ವ್ಯವಸ್ಥೆಗಳು, ಭೂಗತ ಮೂಲಸೌಕರ್ಯ ವ್ಯವಸ್ಥೆಗಳ ಸಹಿತ ಹಲವು ಮಿಲಿಟರಿ ನೆಲೆಗಳಿಗೆ ಹೊಡೆತ ನೀಡಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಶನಿವಾರ ರಾತ್ರಿಯಿಂದ ಜಬಾಲಿಯಾ ಮೇಲೆ ಸರಣಿ ದಾಳಿಗಳು ನಡೆದಿದ್ದು ಹಲವಾರು ಸಾವು-ನೋವಿನ ಪ್ರಕರಣ ವರದಿಯಾಗಿದೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹ್ಮೂದ್ ಬಸಾಲ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News