ಇಮ್ರಾನ್‍ಖಾನ್ ವಿರುದ್ಧ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲು

Update: 2023-09-21 17:37 GMT

 ಇಮ್ರಾನ್‍ಖಾನ್ | Photo: PTI 

ಇಸ್ಲಮಾಬಾದ್: ಮೇ 9ರಂದು ಪಾಕಿಸ್ತಾನದಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿ ಪದಚ್ಯುತ ಪ್ರಧಾನಿ ಇಮ್ರಾನ್‍ಖಾನ್ ವಿರುದ್ಧ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿದ್ದು ಇದರಲ್ಲಿ ಗರಿಷ್ಟ ಮರಣದಂಡನೆ ಶಿಕ್ಷೆಗೆ ಅವಕಾಶವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಇಮ್ರಾನ್ ಬಂಧನವನ್ನು ವಿರೋಧಿಸಿ ಅವರ ಪಕ್ಷದ ಬೆಂಬಲಿಗರು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಇಮ್ರಾನ್‍ಖಾನ್ `ಸೇನಾ ಕಚೇರಿಗಳ ಮೇಲೆ ದಾಳಿ ನಡೆಸುವಂತೆ ಹಾಗೂ ದಂಗೆ ಏಳುವಂತೆ ಜನರನ್ನು ಪ್ರಚೋದಿಸಿದ್ದಾರೆ' ಎಂದು ಗುರುವಾರ ಸುದ್ಧಿಗೋಷ್ಟಿಯಲ್ಲಿ ಲಾಹೋರ್ ಪೊಲೀಸ್‍ನ ಹಿರಿಯ ತನಿಖಾಧಿಕಾರಿ ಅನೂಷ್ ಮಸೂದ್ ಹೇಳಿದ್ದಾರೆ.

ಮೇ 9ರಂದು ನಡೆದಿದ್ದ ಹಿಂಸಾಚಾರದಲ್ಲಿ ರಾವಲ್ಪಿಂಡಿಯ ಸೇನಾ ಕೇಂದ್ರ ಕಚೇರಿ ಸೇರಿದಂತೆ ಹಲವು ಸೇನಾ ಸ್ಥಾಪನೆಗಳು ಹಾಗೂ ಸರಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನಡೆಸಿದ ತನಿಖೆಯಲ್ಲಿ ಇಮ್ರಾನ್ ಹಾಗೂ ಅವರ ಪಕ್ಷದ ಇತರ ಹಿರಿಯ ಮುಖಂಡರು ಈ ದಾಳಿಗೆ ಪ್ರಚೋದನೆ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಹಾಗೂ ಅವರ ಪಕ್ಷದ ಮುಖಂಡರ ವಿರುದ್ಧ ದಂಗೆಗೆ ಪ್ರಚೋದನೆ, ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಪ್ರಚೋದನೆ ನೀಡಿರುವುದು ಸೇರಿದಂತೆ 9 ಇತರ ಪ್ರಕರಣಗಳನ್ನೂ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News