ಜನವರಿಯಲ್ಲಿ ಚುನಾವಣೆ :ಪಾಕ್ ಚುನಾವಣಾ ಆಯೋಗ ಘೋಷಣೆ

Update: 2023-09-21 17:28 GMT

ಚುನಾವಣಾ ಆಯೋಗ| Photo: NDTV 

ಇಸ್ಲಮಾಬಾದ್: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ 2024ರ ಜನವರಿ ಅಂತಿಮ ವಾರದಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ಘೋಷಿಸಿದೆ.

ಕ್ಷೇತ್ರಗಳ ವಿಂಗಡಣೆ ಕಾರ್ಯವನ್ನು ಪರಿಶೀಲಿಸಿದ್ದು , ಕ್ಷೇತ್ರಗಳ ವಿಂಗಡಣೆಯ ಆರಂಭಿಕ ಪಟ್ಟಿಯನ್ನು ಸೆಪ್ಟಂಬರ್ 27ರಂದು ಪ್ರಕಟಿಸಲಾಗುವುದು. ಪಟ್ಟಿಯ ಕುರಿತ ಸಲಹೆ, ಆಕ್ಷೇಪಗಳನ್ನು ಸ್ವೀಕರಿಸಿದ ಬಳಿಕ ಅಂತಿಮ ಪಟ್ಟಿಯನ್ನು ನವೆಂಬರ್ 30ರಂದು ಪ್ರಕಟಿಸಲಾಗುವುದು. ಸಾರ್ವತ್ರಿಕ ಚುನಾವಣೆ 2024 ಜನವರಿ ಅಂತಿಮ ವಾರದಲ್ಲಿ ನಡೆಯಲಿದೆ ಎಂದು ಆಯೋಗ ಹೇಳಿದೆ.

ಪಾಕಿಸ್ತಾನದಲ್ಲಿ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಯ 90 ದಿನದೊಳಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಆಗಸ್ಟ್ 9ರಂದು ಅಸೆಂಬ್ಲಿ ವಿಸರ್ಜನೆಯಾಗಿರುವುದರಿಂದ ನವೆಂಬರ್ 9ರ ಒಳಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಆದರೆ ಕ್ಷೇತ್ರಗಳ ಮರುವಿಂಗಡಣೆ ಕಾರ್ಯದಿಂದಾಗಿ ವಿಳಂಬವಾಗಲಿದೆ ಎಂದು ಚುನಾವಣಾ ಆಯೋಗ ಈ ಹಿಂದೆಯೇ ಹೇಳಿಕೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News