ಸುನಾಕ್‍ಗೆ ಕೊಕ್: ಕನ್ಸರ್ವೇಟಿವ್ ಪಾರ್ಟಿಗೆ ಮೊಟ್ಟಮೊದಲ ಕಪ್ಪು ಮಹಿಳೆ ನಾಯಕಿ
ಲಂಡನ್: ಬ್ರಿಟನ್‍ನಲ್ಲಿ ಕನ್ಸರ್ವೇಟಿವ್ ಪಾರ್ಟಿ 1834ರಲ್ಲಿ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ನಾಯಕಿಯಾಗಿ ಕಪ್ಪು ಮಹಿಳೆ ಕೆಮಿ ಬಡೆನೋಚ್ ಅವರನ್ನು ಆಯ್ಕೆ ಮಾಡಲಾಗಿದೆ. ಶನಿವಾರ ಅವರನ್ನು ನೂತನ ವಿರೋಧ ಪಕ್ಷದ ನಾಯಕಿಯಾಗಿ ಘೋಷಿಸಲಾಯಿತು. ಬ್ರಿಟನ್‍ನ ರಾಜಕೀಯ ಇತಿಹಾಸದಲ್ಲಿ ಯಾವುದೇ ಪ್ರಮುಖ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಮೊಟ್ಟಮೊದಲ ಕಪ್ಪು ಮಹಿಳೆ ಎಂಬ ಕೀರ್ತಿಗೂ ಅವರು ಪಾತ್ರರಾದರು.
ಮೂರು ಮಕ್ಕಳ ತಾಯಿಯಾಗಿರುವ 44 ವರ್ಷದ ಬಡೆನೋಚ್, ಪಕ್ಷದ ಸದಸ್ಯರು ಚಲಾಯಿಸಿದ ಮತಗಳ ಪೈಕಿ 41388 ಮತಗಳನ್ನು ಪಡೆದರು. ಇತರ ನಾಲ್ವರು ಅಭ್ಯರ್ಥಿಗಳು ಸಂಸದೀಯ ಪಕ್ಷದ ನಾಯಕನ ರೇಸ್‍ನಿಂದ ಹೊರಬಿದ್ದರು.
ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಕನ್ಸರ್ವೇಟಿವ್ ಪಾರ್ಟಿ, 2021ರ ಡಿಸೆಂಬರ್‌ನಿಂದೀಚೆಗೆ ಮೊಟ್ಟಮೊದಲ ಬಾರಿಗೆ ಲೇಬರ್ ಪಾರ್ಟಿಗಿಂತ ಮುನ್ನಡೆಯಲ್ಲಿರುವ ಸಂದರ್ಭದಲ್ಲೇ ಈ ಫಲಿತಾಂಶ ಪ್ರಕಟವಾಗಿದೆ.
ನೈಜೀರಿಯಾಮೂಲದ ಕುಟುಂಬದಲ್ಲಿ ಜನಿಸಿದ ಇವರು, ರಿಷಿ ಸುನಾಕ್ ಅವರ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಸುನಾಕ್ ಈ ಮೊದಲು ಟೋರಿಗಳ ನಾಯಕರಾದ ಮೊಟ್ಟಮೊದಲ ಬಿಳಿಯೇತರ ಮುಖಂಡ ಎನಿಸಿಕೊಂಡಿದ್ದರು. ಪಕ್ಷಕ್ಕೆ ಪುನಶ್ಚೇತನ ನೀಡುವ ಸಂಕಲ್ಪವನ್ನು ಅವರು ತಮ್ಮ ವಿಜಯೋತ್ಸವ ಭಾಷಣದಲ್ಲಿ ವ್ಯಕ್ತಪಡಿಸಿದರು.
ಬಡೆನೋಚ್ ಅವರನ್ನು ಲಾಗೋಸ್‍ಗೆ ಕರೆದೊಯ್ದ ಪೊಲೀಸರು, ಮಿಲಿಟರಿ ಆಡಳಿತದಲ್ಲಿ ಬೆಳೆಸಿದರು. ಬಳಿಕ 16ನೇ ವಯಸ್ಸಿನಲ್ಲಿ ಅವರು ಬ್ರಿಟನ್‍ಗೆ ಮರಳಿದರು. 2017ರಲ್ಲಿ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾದರು.