ನಮ್ಮ ಬೇಡಿಕೆಗೆ ಒಪ್ಪಿದರೆ ಆಹಾರ ರಫ್ತು ಒಪ್ಪಂದ ಸಾಧ್ಯ: ಪುಟಿನ್
Update: 2023-09-04 17:45 GMT
ಮಾಸ್ಕೊ: ಉಕ್ರೇನ್‍ನ ಬಂದರುಗಳಿಂದ ಕಪ್ಪು ಸಮುದ್ರದ ಮೂಲಕ ಆಹಾರ ಧಾನ್ಯಗಳನ್ನು ರಫ್ತು ಮಾಡುವುದಕ್ಕೆ ಸಂಬಂಧಿಸಿದ ಒಪ್ಪಂದ ಮರುಸ್ಥಾಪನೆಯಾಗುವ ಮುನ್ನ ತನ್ನ ಕೆಲವು ಬೇಡಿಕೆಗಳಿಗೆ ಪಾಶ್ಚಿಮಾತ್ಯ ದೇಶಗಳು ಒಪ್ಪಬೇಕು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಹೇಳಿದ್ದಾರೆ.
ಆಹಾರ ಧಾನ್ಯ ಒಪ್ಪಂದದ ಮರುಸ್ಥಾಪನೆಗೆ ವಿಶ್ವಸಂಸ್ಥೆಯ ನೆರವಿನೊಂದಿಗೆ ಟರ್ಕಿಯ ಅಧ್ಯಕ್ಷ ಎರ್ಡೋಗನ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಪುಟಿನ್, ರಶ್ಯದ ಕೃಷಿ ಉತ್ಪನ್ನಗಳ ರಫ್ತಿಗೆ ವ್ಯವಸ್ಥೆ ಮಾಡುವ ಬದ್ಧತೆಯನ್ನು ಪಾಶ್ಚಿಮಾತ್ಯರು ಈಡೇರಿಸಿದರೆ ಮಾತ್ರ ಉಕ್ರೇನ್ ಆಹಾರ ಧಾನ್ಯ ಒಪ್ಪಂದದ ಮರುಸ್ಥಾಪನೆಗೆ ರಶ್ಯ ಸಮ್ಮತಿಸಲಿದೆ ಎಂದು ಹೇಳಿದ್ದಾರೆ.