ಫ್ರಾನ್ಸ್: ಚಂಡಮಾರುತದ ಅಬ್ಬರಕ್ಕೆ 14 ಮಂದಿ ಬಲಿ
Update: 2024-12-15 17:49 GMT
ಪ್ಯಾರಿಸ್: ಹಿಂದೂ ಮಹಾಸಾಗರದಲ್ಲಿರುವ ಫ್ರೆಂಚ್ ದ್ವೀಪ ಮಯೊಟ್ಟೆಯಲ್ಲಿ ಚಂಡಮಾರುತದ ಅಬ್ಬರಕ್ಕೆ ಕನಿಷ್ಟ 14 ಮಂದಿ ಬಲಿಯಾಗಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಗಂಟೆಗೆ 220 ಕಿ.ಮೀ ವೇಗದ ಗಾಳಿಯೊಂದಿಗೆ ಮಯೊಟ್ಟೆ ದ್ವೀಪದ ಪೆಟೈಟ್ ಟೆರ್ರೆ ಪ್ರದೇಶದಲ್ಲಿ ವ್ಯಾಪಕ ಪ್ರಾಣಹಾನಿ ಮತ್ತು ನಷ್ಟವನ್ನುಂಟು ಮಾಡಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು 140 ನಾಗರಿಕ ಭದ್ರತಾ ಸಿಬ್ಬಂದಿಯನ್ನು ರವಾನಿಸಲಾಗಿದೆ. ಚಂಡಮಾರುತ ಈಗ ಮೊಝಾಂಬಿಕ್ ಕರಾವಳಿಯತ್ತ ಸಾಗಿದೆ ಎಂದು ಫ್ರಾನ್ಸ್ ನ ಆಂತರಿಕ ಸಚಿವ ಬ್ರೂನೊ ರಿಟಾಲಿಯು ಹೇಳಿದ್ದಾರೆ.