ಸಿರಿಯಾ ವಿರುದ್ಧದ ನಿರ್ಬಂಧ ತೆರವಿಗೆ ವಿಶ್ವಸಂಸ್ಥೆ ಪ್ರತಿನಿಧಿ ಆಗ್ರಹ
Update: 2024-12-15 18:01 GMT
ದಮಾಸ್ಕಸ್: ಅಧ್ಯಕ್ಷರಾಗಿದ್ದ ಬಶರ್ ಅಸ್ಸಾದ್ ಪದಚ್ಯುತಗೊಂಡಿರುವ ಹಿನ್ನೆಲೆಯಲ್ಲಿ ಸಿರಿಯಾದ ವಿರುದ್ಧ ಪಾಶ್ಚಿಮಾತ್ಯ ದೇಶಗಳು ವಿಧಿಸಿದ್ದ ನಿರ್ಬಂಧಗಳನ್ನು ತಕ್ಷಣ ತೆರವುಗೊಳಿಸುವಂತೆ ಸಿರಿಯಾಕ್ಕೆ ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿ ಗೈರ್ ಪೆಡರ್ಸನ್ ರವಿವಾರ ಆಗ್ರಹಿಸಿದ್ದಾರೆ.
2011ರಲ್ಲಿ ನಡೆದ ಪ್ರತಿಭಟನೆಯನ್ನು ಕ್ರೂರವಾಗಿ ನಿಯಂತ್ರಿಸಿದ ಸರಕಾರದ ಕ್ರಮವನ್ನು ಖಂಡಿಸಿ ಅಮೆರಿಕ, ಯುರೋಪಿಯನ್ ಯೂನಿಯನ್ ಹಾಗೂ ಇತರ ದೇಶಗಳು ಸಿರಿಯಾ ವಿರುದ್ಧ ನಿರ್ಬಂಧ ಜಾರಿಗೊಳಿಸಿವೆ. ಈ ಪ್ರತಿಭಟನೆ ಬಳಿಕ ಅಂತರ್ಯುದ್ಧದ ರೂಪ ಪಡೆದಿತ್ತು. `ಇದೀಗ ಸಿರಿಯಾದ ವಿರುದ್ಧದ ನಿರ್ಬಂಧ ತೆರವಾಗಲಿದೆ ಎಂಬ ನಿರೀಕ್ಷೆಯಿದೆ. ಇದು ಸಿರಿಯಾವನ್ನು ಮರು ನಿರ್ಮಿಸುವ ಕಾರ್ಯಕ್ಕೆ ಪೂರಕವಾಗಲಿದೆ' ಎಂದು ಪೆಡರ್ಸನ್ ಹೇಳಿದ್ದಾರೆ.