ಗಾಝಾ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಪತ್ರಕರ್ತ ಮೃತ್ಯು
Update: 2024-12-15 17:58 GMT
ಗಾಝಾ: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಫೆಲೆಸ್ತೀನ್‍ನ ಪತ್ರಕರ್ತ ಸಾವನ್ನಪ್ಪಿದ್ದು, ಇದರೊಂದಿಗೆ ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಗಾಝಾದ ಮೇಲೆ ಇಸ್ರೇಲ್‍ನ ಆಕ್ರಮಣ ಆರಂಭಗೊಂಡಂದಿನಿಂದ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಪತ್ರಕರ್ತರ ಸಂಖ್ಯೆ 195ಕ್ಕೆ ತಲುಪಿದೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ.
ಶನಿವಾರ ಗಾಝಾ ನಗರದ ಉತ್ತರದಲ್ಲಿ ಅಹ್ಮದ್ ಯಾಸಿನ್ ರಸ್ತೆಯಲ್ಲಿರುವ ಮನೆಯನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ಮಾನವರಹಿತ ಹೆಲಿಕಾಪ್ಟರ್ ದಾಳಿಯಲ್ಲಿ ಲೆಬನಾನ್ ಮತ್ತು ದುಬೈ ಮೂಲದ ಖಾಸಗಿ ಟಿವಿ ಚಾನೆಲ್ ಅಲ್-ಮಶಾದ್‍ನ ವರದಿಗಾರ ಮುಹಮ್ಮದ್ ಬಲೂಷ ಮೃತಪಟ್ಟಿರುವುದಾಗಿ ಫೆಲೆಸ್ತೀನ್ ಪತ್ರಕರ್ತರ ವೇದಿಕೆ ವರದಿ ಮಾಡಿದೆ.