ಗಾಝಾದಲ್ಲಿ ಗೆಲುವು ತಡವಾಗಬಹುದು, ಆದರೆ ಖಚಿತ: ಹಮಾಸ್ ಮಾಜಿ ಮುಖಂಡ ಖಲೀದ್ ಮಶಾಲ್
Update: 2024-10-07 15:30 GMT
ದುಬೈ: ಗಾಝಾದಲ್ಲಿ ನಡೆಯುತ್ತಿರುವುದು ಹತ್ಯಾಕಾಂಡ. ಎಲ್ಲಾ ರಾಜಕೀಯ ಕ್ಷಿತಿಜಗಳು ಮುಚ್ಚಿಹೋದ ಬಳಿಕ ಅಕ್ಟೋಬರ್ 7ರ ದಾಳಿ ನಡೆದಿದೆ ಮತ್ತು ಇದು ಕಾರ್ಯತಂತ್ರದ ಫಲಿತಾಂಶವನ್ನು ಸಾಧಿಸಿದೆ ಎಂದು ಹಮಾಸ್ನ ಮಾಜಿ ಮುಖಂಡ ಖಲೀದ್ ಮಶಾಲ್ ಹೇಳಿದ್ದಾರೆ.
ಹಮಾಸ್ಗೆ ಬೆಂಬಲ ನೀಡಿದ ಹಿಜ್ಬುಲ್ಲಾ, ಹೌದಿ ಮತ್ತು ಇರಾನ್ಗೆ ಧನ್ಯವಾದ ಅರ್ಪಿಸಿದ ಅವರು ಗಾಝಾಕ್ಕೆ ಆರ್ಥಿಕ ನೆರವು ಒದಗಿಸುವಂತೆ ಅರಬ್ ದೇಶಗಳನ್ನು ವಿನಂತಿಸಿದರು. `ಗಾಝಾದಲ್ಲಿ ಗುರಿ ಸಾಧನೆಗೆ ವಿಫಲವಾದ ಬಳಿಕ ಇಸ್ರೇಲ್ ಲೆಬನಾನ್ನಲ್ಲಿ ಯುದ್ಧದ ಕ್ಷೇತ್ರವನ್ನು ತೆರೆದಿದೆ ಮತ್ತು ಜೋರ್ಡಾನ್ ಹಾಗೂ ಈಜಿಪ್ಟ್ ವಿರುದ್ಧ ಪಿತೂರಿ ನಡೆಸುತ್ತಿದೆ. ಗಾಝಾದ ಜನರು ಹತಾಶರಾಗಬಾರದು. ಶೀಘ್ರದಲ್ಲೇ ಗೆಲುವು ನಿಮ್ಮದಾಗಲಿದೆ' ಎಂದು ಭರವಸೆ ನೀಡಿದರು.