ಜರ್ಮನಿ ಚುನಾವಣೆ: ವಿರೋಧ ಪಕ್ಷಗಳಿಗೆ ಭಾರಿ ಗೆಲುವಿನ ನಿರೀಕ್ಷೆ

Update: 2025-02-24 08:00 IST
ಜರ್ಮನಿ ಚುನಾವಣೆ: ವಿರೋಧ ಪಕ್ಷಗಳಿಗೆ ಭಾರಿ ಗೆಲುವಿನ ನಿರೀಕ್ಷೆ

ಫ್ರೆಡ್ರಿಕ್ ಮೆರ್ಝ್ PC: x.com/_FriedrichMerz

  • whatsapp icon

ಜರ್ಮನಿ ಸಂಸತ್ತಿಗೆ ರವಿವಾರ ನಡೆದ ಚುನಾವಣೆಯಲ್ಲಿ ಮತದಾರರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದು, ವಿರೋಧ ಪಕ್ಷದ ನಾಯಕ ಫ್ರೆಡ್ರಿಕ್ ಮೆರ್ಝ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮತಗಟ್ಟೆ ನಿರ್ಗಮನ ಸಮೀಕ್ಷೆಗಳಿಂದ ತಿಳಿದು ಬರುವಂತೆ ಆಲ್ಟರ್ನೇಟಿವ್ ಫಾರ್ ಜರ್ಮನಿ (ಎಎಫ್ ಡಿ) ಎರಡನೇ ಮಹಾಯುದ್ಧದ ಬಳಿಕ ಅತ್ಯುತ್ತಮ ಪ್ರದರ್ಶನ ನೀಡಲಿದೆ.

ಟ್ರಂಪ್ ಆಡಳಿತದ ಜತೆಗಿನ ಸಂಬಂಧ, ರಷ್ಯಾ- ಉಕ್ರೇನ್ ಸಂಘರ್ಷ ಮತ್ತು ಯೂರೋಪ್ ಖಂಡದ ಭದ್ರತಾ ಕಳವಳಗಳು ಸೇರಿದಂತೆ ಯುರೋಪಿಯನ್ ಸವಾಲುಗಳ ನಡುವೆಯೇ ನಡೆದಿರುವ ಚುನಾವಣೆಯಲ್ಲಿ ಇ ಬಲಪಂಥೀಯ ಪಕ್ಷ ಅತ್ಯುತ್ತಮ ಸಾಧನೆಗೆ ಸಜ್ಜಾಗಿದೆ.

"ನನ್ನ ಹೊಣೆಗಾರಿಕೆಗಳ ಬಗ್ಗೆ ನನಗೆ ಅರಿವು ಇದೆ. ನಮ್ಮ ಮುಂದಿರುವ ಸವಾಲುಗಳ ಅಗಾಧತೆಯ ಬಗ್ಗೆಯೂ ಅರಿವು ಇದೆ. ಇವುಗಳ ಬಗ್ಗೆ ಅತ್ಯಂತ ಗೌರವದ ದೃಷ್ಟಿಕೋನ ಹೊಂದಿದ್ದೇನೆ ಹಾಗೂ ಅದು ಸುಲಭವಲ್ಲ ಎನ್ನುವ ಜ್ಞಾನ ನನಗಿದೆ" ಎಂದು ಅವರು ಹೇಳಿದ್ದಾರೆ.

"ಹೊರ ಜಗತ್ತು ನಮಗಾಗಿ ಕಾಯುವುದಿಲ್ಲ. ಸುಧೀರ್ಘ ಕಾಲದಿಂದ ಇರುವ ಸಮ್ಮಿಶ್ರ ಮಾತುಕತೆಗಳಿಗೆ ಮತ್ತು ಸಂಧಾನಗಳಿಗೆ ಅದು ಕಾಯುವುದಿಲ್ಲ" ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು. ಮತ್ತೆ ನಾವು ತ್ವರಿತವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಬೇಕಾಗಿದೆ" ಎಂದು ಹೇಳಿದರು.

ಆರಂಭಿಕ ಎಣಿಕೆ ಅಂಕಿ ಅಂಶಗಳ ಪ್ರಕಾರ ಮೆರ್ಝ್ ಅವರ ಯೂನಿಯನ್ ಬ್ಲಾಕ್ ಶೇಕಡ 29ರಷ್ಟು ಬೆಂಬಲ ಪಡೆದಿದ್ದು, ಎಎಫ್ ಡಿ ಶೇಕಡ 20ರಷ್ಟು ಮತಗಳನ್ನು ಪಡೆದಿದೆ. ಇದು 2021ರ ಚುನಾವಣೆಯಲ್ಲಿ ಗಳಿಸಿದ ಮತದ ದುಪ್ಪಟ್ಟಾಗಿದೆ.

ಶೋಲ್ಸ್ ಅವರ ಸೋಶಿಯಲ್ ಡೆಮಾಕ್ರಟಿಕ್ ಪಕ್ಷ ಭಾರಿ ಹಿನ್ನಡೆ ಕಂಡಿದ್ದು, ಶೇಕಡ 16ರಷ್ಟು ಮತಗಳನ್ನು ಮಾತ್ರ ಪಡೆದಿದೆ. ಇದರ ಮಿತ್ರ ಪಕ್ಷಗಳಾದ ಎನ್ವಿರಾನ್ಮೆಂಟ್ ಗ್ರೀನ್ಸ್ ಶೇಕಡ 12-13ರಷ್ಟು ಮತಗಳನ್ನಷ್ಟೇ ಪಡೆದಿದೆ. ಚಿಕ್ಕ ಪಕ್ಷಗಳ ಪೈಕಿ ಹಾರ್ಡ್ ಲೆಫ್ಟ್ ಲೆಫ್ಟ್ ಪಾರ್ಟಿ ಶೇಕಡ 9ರಷ್ಟು ಬೆಂಬಲ ಪಡೆದಿದ್ದರೆ, ಉದ್ಯಮ ಪರ ಫ್ರೀ ಡೆಮಾಕ್ರೇಟ್ಸ್ ಮತ್ತು ಸಹ್ರಾ ವೇಗನ್ ನೆಕ್ಟ್ ಅಲೈನ್ಸ್ ಶೇಕಡ 5ರಷ್ಟು ಮತಗಳನ್ನು ಪಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News