ಟೆಲ್ಅವೀವ್ ನಲ್ಲಿ ಬಾಂಬ್ ಸ್ಫೋಟ | ಹೊಣೆ ಹೊತ್ತ ಹಮಾಸ್
Update: 2024-08-19 14:46 GMT
ಟೆಲ್ಅವೀವ್ : ಇಸ್ರೇಲ್ ನ ವಾಣಿಜ್ಯ ರಾಜಧಾನಿ ಎಂದೇ ಹೆಸರಾಗಿರುವ ಟೆಲ್ಅವೀವ್ ನಲ್ಲಿ ರವಿವಾರ ರಾತ್ರಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಹಮಾಸ್ ವಹಿಸಿಕೊಂಡಿದೆ.
ಟೆಲ್ಅವೀವ್ ನಲ್ಲಿ ರವಿವಾರ ರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆಯನ್ನು ನಾವು ವಹಿಸಿಕೊಂಡಿದ್ದೇವೆ' ಎಂದು ಹಮಾಸ್ ಸೋಮವಾರ ಹೇಳಿದೆ. ಬಾಂಬ್ ಸ್ಫೋಟದಲ್ಲಿ ದಾಳಿಕೋರ ಸಾವನ್ನಪ್ಪಿದ್ದು ಓರ್ವ ವ್ಯಕ್ತಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಆಕ್ರಮಣಕೋರ ಪಡೆ(ಇಸ್ರೇಲ್) ಹತ್ಯಾಕಾಂಡಗಳು, ನಾಗರಿಕರ ಸ್ಥಳಾಂತರ ಮತ್ತು ಹತ್ಯೆಗಳ ನೀತಿಯು ಮುಂದುವರಿಯುವವರೆಗೆ ಇಂತಹ ಇನ್ನಷ್ಟು ದಾಳಿಗಳು ನಡೆಯುತ್ತಲೇ ಇರುತ್ತವೆ ಎಂದು ಹಮಾಸ್ ಹೇಳಿದೆ. ರವಿವಾರ ರಾತ್ರಿ ಟೆಲ್ಅವೀವ್ ನಲ್ಲಿ ನಡೆದ ಶಕ್ತಿಶಾಲಿ ಸ್ಫೋಟವು ಭಯೋತ್ಪಾದಕ ದಾಳಿಯಾಗಿದ್ದು ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಇಸ್ರೇಲ್ ಪೊಲೀಸರು ಸೋಮವಾರ ಹೇಳಿದ್ದಾರೆ.