ಹಮಾಸ್ ಮುಖಂಡ ಸಿನ್ವರ್ ಜೀವಂತ : ವರದಿ

Update: 2024-10-08 16:30 GMT

 ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ | PC : PTI

ಗಾಝಾ : ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಜೀವಂತವಿದ್ದಾರೆ ಮತ್ತು ಇತ್ತೀಚೆಗೆ ಖತರ್ ನ ಅಧಿಕಾರಿಗಳನ್ನು ಸಂಪರ್ಕಿಸಿದ್ದರು ಎಂದು `ಅಲ್ ಅರೆಬಿಯಾ' ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಗ್ಗೆ 62 ವರ್ಷದ ಸಿನ್ವರ್ ಪಶ್ಚಾತ್ತಾಪ ಪಡಲಿಲ್ಲ ಎಂದು ಅವರನ್ನು ಭೇಟಿಯಾದವರು ಹೇಳಿರುವುದಾಗಿ ವರದಿಯಾಗಿದೆ. ಸಿನ್ವರ್ ಈ ದಾಳಿಯ ಪ್ರಮುಖ ಸೂತ್ರಧಾರನಾಗಿದ್ದಾರೆ. ನಿರಂತರ ನೆಲೆ ಬದಲಿಸುತ್ತಿರುವ ಸಿನ್ವರ್, ರಹಸ್ಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ಡಿಜಿಟಲ್ ಅಲ್ಲದ ಸಂವಹನಕ್ಕಾಗಿ ವಿಶ್ವಾಸಾರ್ಹ ಸಂದೇಶವಾಹಕರನ್ನು ಬಳಸುತ್ತಿದ್ದಾರೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News