ರಶ್ಯದ ಗಗನನೌಕೆ ಪತನದಿಂದ ಚಂದ್ರನಲ್ಲಿ ಬೃಹತ್ ಕುಳಿ : ನಾಸಾ ವರದಿ

Update: 2023-09-01 17:22 GMT

ವಾಷಿಂಗ್ಟನ್, ಸೆ.1: ಕಳೆದ ತಿಂಗಳು ರಶ್ಯದ ಲೂನ-25 ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಂದರ್ಭ ಪತನಗೊಂಡ ಸ್ಥಳದಲ್ಲಿ 10 ಮೀಟರ್ ಅಗಲದ ಕುಳಿ ಸೃಷ್ಟಿಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಬಿಡುಗಡೆಗೊಳಿಸಿದ ಫೋಟೋ ಸಹಿತ ವರದಿ ಹೇಳಿದೆ.

ಕಳೆದ 47 ವರ್ಷಗಳಲ್ಲೇ ರಶ್ಯ ನಡೆಸಿದ ಪ್ರಥಮ ಚಂದ್ರಯಾನದ ಅಂಗವಾಗಿ ಅಂತರಿಕ್ಷಕ್ಕೆ ನೆಗೆದಿದ್ದ ಲೂನ ಗಗನನೌಕೆ ಆಗಸ್ಟ್ 19ರಂದು ನಿಯಂತ್ರಣ ಕಳೆದುಕೊಂಡು ಚಂದ್ರನ ಮೇಲ್ಮೈಯಲ್ಲಿ ಪತನಗೊಂಡಿತ್ತು. ಇದೀಗ ಚಂದ್ರನ ಮೇಲ್ಮೈಯಲ್ಲಿ ಮೂಡಿರುವ ಹೊಸ ಕುಳಿಯ ವೀಡಿಯೊವನ್ನು ನಾಸಾದ ಚಂದ್ರನ ವಿಚಕ್ಷಣ ಶೋಧಕ ವ್ಯವಸ್ಥೆ(ಎಲ್‍ಆರ್‍ಒ) ರವಾನಿಸಿದ್ದು ಇದು ರಶ್ಯದ ಲೂನಾ 25 ಗಗನನೌಕೆ ಪತನಗೊಂಡ ಸ್ಥಳವಾಗಿರಬಹುದು. ಈ ಕುಳಿ ಸುಮಾರು 10 ಮೀಟರ್ ಅಗಲವಿದೆ ಎಂದು ನಾಸಾದ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News