ಉಕ್ರೇನ್‍ಗೆ ಎಫ್-16 ಜೆಟ್ ಒದಗಿಸಿದರೆ ಸಂಘರ್ಷ ಉಲ್ಬಣ; ಡೆನ್ಮಾರ್ಕ್‍ಗೆ ರಶ್ಯ ಎಚ್ಚರಿಕೆ

If F-16 jets are provided to Ukraine, the conflict escalates; Russia warns Denmark

Update: 2023-08-21 17:31 GMT

Photo: twitter/HarunMedium

ಮಾಸ್ಕೊ: ಉಕ್ರೇನ್‍ಗೆ ಅಮೆರಿಕದ ಎಫ್-16 ಯುದ್ಧವಿಮಾನ ಒದಗಿಸುವ ಡೆನ್ಮಾರ್ಕ್‍ನ ನಿರ್ಧಾರ ಸಂಘರ್ಷ ಉಲ್ಬಣಕ್ಕೆ ಕಾರಣವಾಗಲಿದೆ ಎಂದು ಡೆನ್ಮಾರ್ಕ್‍ಗೆ ರಶ್ಯದ ರಾಯಭಾರಿ ಸೋಮವಾರ ಎಚ್ಚರಿಸಿದ್ದಾರೆ.

ರಶ್ಯದ ಆಕ್ರಮಣವನ್ನು ಎದುರಿಸಲು ಉಕ್ರೇನ್‍ಗೆ ನೆರವಾಗುವ ನಿಟ್ಟಿನಲ್ಲಿ ಉಕ್ರೇನ್‍ಗೆ ಎಫ್-16 ಯುದ್ಧವಿಮಾನ ಪೂರೈಸುವುದಾಗಿ ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ ರವಿವಾರ ಘೋಷಿಸಿವೆ. ಉಕ್ರೇನ್‍ಗೆ ಈ ವರ್ಷಾಂತ್ಯಕ್ಕೆ 6, ಮುಂದಿನ ವರ್ಷ 8 ಮತ್ತು 2024ರಲ್ಲಿ 5 ಎಫ್-16 ಯುದ್ಧವಿಮಾನ ಒದಗಿಸುವುದಾಗಿ ಡೆನ್ಮಾರ್ಕ್ ಪ್ರಧಾನಿ ಮೆಟ್ ಫ್ರೆಡರಿಕ್ಸನ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಯ ರಾಯಭಾರಿ ವ್ಲಾದಿಮಿರ್ ಬಾರ್ಬಿನ್ `ಉಕ್ರೇನ್‍ಗೆ ಎಫ್-16 ಯುದ್ಧವಿಮಾನ ಒದಗಿಸುವುದು ಸಂಘರ್ಷ ಉಲ್ಬಣಕ್ಕೆ ಕಾರಣವಾಗಲಿದೆ.

ಉಕ್ರೇನ್ ಸ್ವತಃ ಶಾಂತಿಯ ಷರತ್ತುಗಳನ್ನು ನಿರ್ಧರಿಸಬೇಕು ಎಂಬ ಕಾರಣದ ಹಿಂದೆ ಅಡಗಿಕೊಂಡು ಡೆನ್ಮಾರ್ಕ್ ತನ್ನ ಕಾರ್ಯಗಳ ಮೂಲಕ ರಶ್ಯದೊಂದಿಗಿನ ಮಿಲಿಟರಿ ಮುಖಾಮುಖಿಯ ಏಕೈಕ ಆಯ್ಕೆಯನ್ನು ಉಕ್ರೇನ್‍ಗೆ ಅನಿವಾರ್ಯವಾಗಿಸಲಿದೆ. ಈ ಪರಿಸ್ಥಿತಿಯು ಉಕ್ರೇನ್ ಅನ್ನು ಪ್ರಪಾತಕ್ಕೆ ತಳ್ಳಲಿದೆ' ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News