ಬಹುಮತವಿದ್ದರೆ ಸರಕಾರ ರಚಿಸಿ ; ಇಮ್ರಾನ್ ಖಾನ್‍ಗೆ ಶಹಬಾಝ್ ಷರೀಫ್ ಸವಾಲು

Update: 2024-02-13 17:18 GMT

ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌‌ (Photo: PTI)

ಇಸ್ಲಮಾಬಾದ್: ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸಿದರೆ ತಮ್ಮ ಪಕ್ಷ ವಿಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳಲು ಸಿದ್ಧ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಝ್(ಪಿಎಂಎಲ್-ಎನ್) ಅಧ್ಯಕ್ಷ ಶಹಬಾಝ್ ಷರೀಫ್ ಸವಾಲೆಸೆದಿದ್ದಾರೆ.

ಮಂಗಳವಾರ ಇಸ್ಲಮಾಬಾದ್‍ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು `ನಿಮಗೆ ಬಹುಮತವಿದ್ದರೆ ಸರಕಾರ ರಚಿಸಿ. ಇಲ್ಲದಿದ್ದರೆ ವಿಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳಿ' ಎಂದು ಪಿಟಿಐ ಪಕ್ಷವನ್ನು ಉದ್ದೇಶಿಸಿ ಹೇಳಿದರು. ಪಿಟಿಐ ನಮ್ಮ ದೇಶವನ್ನು ವಿಪತ್ತನ ಅಂಚಿಗೆ ತಂದು ನಿಲ್ಲಿಸಿತ್ತು, ನಾವು ದೇಶವನ್ನು ರಕ್ಷಿಸಿದ್ದೇವೆ. ಪಿಎಂಎಲ್-ಎನ್ ಈಗ ಕೇಂದ್ರದಲ್ಲಿ ಮತ್ತು ಪಂಜಾಬ್ ಪ್ರಾಂತದಲ್ಲಿ ಬಹುಮತ ಹೊಂದಿದೆ. ಹಲವು ಪಕ್ಷೇತರರು ನಮ್ಮ ಪಕ್ಷವನ್ನು ಸೇರಿದ್ದರಿಂದ ನಮ್ಮ ಬಲ 80ಕ್ಕೆ ಏರಿದೆ. ಇನ್ನೂ ಕೆಲವು ಪಕ್ಷೇತರರು ನಮ್ಮ ಕಡೆ ಬರಲಿದ್ದಾರೆ. ಅವರನ್ನು ನಾವು ಖುಷಿಯಿಂದ ಸ್ವೀಕರಿಸುತ್ತೇವೆ. ಅವರು ಹಾಗೆ ಮಾಡದಿದ್ದರೆ ನಾವು ನಮ್ಮ ಸಾಂವಿಧಾನಿಕ ಮತ್ತು ಕಾನೂನು ಹಕ್ಕನ್ನು ಬಳಸುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News