ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ 12 ಪ್ರಕರಣಗಳಲ್ಲಿ ಜಾಮೀನು ನೀಡಿದ ನ್ಯಾಯಾಲಯ

Update: 2024-02-10 08:31 GMT

ಇಮ್ರಾನ್‌ ಖಾನ್‌‌ (PTI)

ಇಸ್ಲಾಮಾಬಾದ್‌: ಕಳೆದ ವರ್ಷದ ಮೇ ತಿಂಗಳಿನಲ್ಲಿ ಪಾಕಿಸ್ತಾನದ ಮಿಲಿಟರಿ ಸಂಬಂದಿ ಸ್ಥಳಗಳ ಮೇಲಿನ ದಾಳಿಗಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಮಾಜಿ ವಿದೇಶಾಂಗ ಸಚಿವ ಶಾಹ್‌ ಮೆಹಮೂದ್‌ ಖುರೇಷಿ ಅವರಿಗೆ ಪಾಕಿಸ್ತಾನದ ಉಗ್ರ-ನಿಗ್ರಹ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಅವರ ಪಕ್ಷದಿಂದ ಬೆಂಬಲಿತ ಹೆಚ್ಚಿನ ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಲ್ಲಿಸಿದ ವಿದ್ಯಮಾನದ ನಂತರ ಈ ಬೆಳವಣಿಗೆ ನಡೆದಿದೆ. ಆದರೆ ವಿಳಂಬಿತ ಚುನಾವಣಾ ಫಲಿತಾಂಶಗಳಲ್ಲಿ ನವಾಝ್ ಶರೀಫ್‌ ಅವರ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಪಾಕಿಸ್ತಾನದಲ್ಲಿ ಮೇ 9ರಂದು ನಡೆದ ಹಿಂಸಾಚಾರದಲ್ಲಿ ದೇಸದ ಹಲವು ಪ್ರಮುಖ ಮಿಲಿಟರಿ ನೆಲೆಗಳು ಹಾನಿಗೀಡಾದ ನಂತರ ಖಾನ್‌ ಹಾಗೂ ಅವರ ಪಾಕಿಸ್ತಾನ್‌ ತೆಹರೀಕ್‌-ಇ-ಇನ್ಸಾಫ್‌ ಪಕ್ಷದ ಹಲವು ಮುಖಂಡರು ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಇಮ್ರಾನ್‌ ಖಾನ್‌ ಅವರನ್ನು ಪ್ಯಾರಾಮಿಲಿಟರಿ ರೇಂಜರ್‌ಗಳು ಬಂಧಿಸಿದ ನಂತರ ಪ್ರತಿಭಟನೆಗಳು ನಡೆದಿದ್ದವು ಹಾಗೂ 20ಕ್ಕೂ ಅಧಿಕ ಮಿಲಿಟರಿ ಸ್ಥಳಗಳು ಮತ್ತು ಸರ್ಕಾರಿ ಕಟ್ಟಡಗಳು ಹಾನಿಗೀಡಾಗಿದ್ದವು. ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯ ಕಾರ್ಯಾಲಯವೂ ಹಾನಿಗೀಡಾಗಿತ್ತು.

ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ತೋಶಖಾನ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿತ್ತು. ಅವರು ಪ್ರಧಾನಿಯಾಗಿದ್ದ ವೇಳೆ ಸರ್ಕಾರಕ್ಕೆ ದೊರೆತ ಉಡುಗೊರೆಗಳನ್ನು ಮಾರಾಟ ಮಾಡಿದ್ದ ಪ್ರಕರಣ ಇದಾಗಿತ್ತು.

ಈ ಶಿಕ್ಷೆಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ರದ್ದುಗೊಳಿಸಿತ್ತು. ನಂತರ ಸರ್ಕಾರದ ರಹಸ್ಯಗಳನ್ನು ಬಹಿರಂಗಗೊಳಿಸಿದ ಸಿಫರ್‌ ಪ್ರಕರಣದಲ್ಲಿ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News