ಭಾರತವು ರಶ್ಯದ ಜೊತೆ ಬಾಂಧವ್ಯ ಹೊಂದಿದ್ದರೂ ಅಮೆರಿಕದ ವ್ಯೆಹಾತ್ಮಕ ಪಾಲುದಾರನಾಗಿದೆ : ಬೈಡೆನ್ ಆಡಳಿತ

Update: 2024-07-10 16:21 GMT

PC : PTI 

ವಾಶಿಂಗ್ಟನ್ : ರಶ್ಯದ ಜೊತೆಗಿನ ಭಾರತದ ಬಾಂಧವ್ಯಗಳ ಕುರಿತು ತಾನು ಆತಂಕಗಳನ್ನು ಹೊಂದಿರುವ ಹೊರತಾಗಿಯೂ ಭಾರತವು ಅಮೆರಿಕದ ವ್ಯೆಹಾತ್ಮಕ ಪಾಲುದಾರನಾಗಿ ಮುಂದುವರಿಯಲಿದೆ ಎಂದು ಬೈಡೆನ್ ಆಡಳಿತವು ತಿಳಿಸಿದೆ.

‘‘ಭಾರತ ಹಾಗೂ ರಶ್ಯವು ಸುದೀರ್ಘ ಸಮಯದಿಂದ ಪರಸ್ಪರ ಬಾಂಧವ್ಯವನ್ನು ಹೊಂದಿವೆ. ಅಮೆರಿಕದ ಮಟ್ಟಿಗೆ ಭಾರತವು ವ್ಯೆಹಾತ್ಮಕ ಪಾಲುದಾರನಾಗಿದೆ. ಅದರ ಜೊತೆ ನಾವು ಪೂರ್ಣ ಮಟ್ಟದ ಹಾಗೂ ಪ್ರಾಮಾಣಿಕ ಮಾತುಕತೆಯನ್ನು ನಡೆಸುವುದನ್ನು ಮುಂದುವರಿಸಲಿದ್ದೇವೆ. ನ್ಯಾಟೋ ಶೃಂಗಸಭೆಯು ಈ ವಾರ ನಡೆಯಲಿರುವುದರಿಂದ ಇಡೀ ವಿಶ್ವವೇ ಈ ಭಾರತ-ರಶ್ಯ ಮಾತುಕತೆಯ ಬಗ್ಗೆ ಗಮನಹರಿಸಿತ್ತು ಎಂದು ಅಮೆರಿಕದ ರಕ್ಷಣಾ ಕಾರ್ಯಾಲವಾದ ಪೆಂಟಾಗನ್ನ ಪತ್ರಿಕಾ ಕಾರ್ಯದರ್ಶಿ ಮೇಜರ್ ಜನರಲ್ ಪ್ಯಾಟ್ ರೈಡರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮನವೊಲಿಸುಲು ಭಾರತವು ರಶ್ಯದ ಜೊತೆಗಿನ ತನ್ನ ಬಾಂಧವ್ಯವನ್ನು ಬಳಸಿಕೊಳ್ಳಬೇಕೆಂದು ಪ್ಯಾಟ್ ರೈಡರ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News