ಸ್ವೀಡನ್‌ ನಲ್ಲಿ ಕುರ್‌ಆನ್‌ ಸುಟ್ಟ ಪ್ರಕರಣ: ಧಾರ್ಮಿಕ ದ್ವೇಷದ ವಿರುದ್ಧ ವಿಶ್ವ ಸಂಸ್ಥೆ ಮಂಡಿಸಿದ ನಿರ್ಣಯದ ಪರ ಮತ ಚಲಾಯಿಸಿದ ಭಾರತ

ಸ್ವೀಡನ್‌ ದೇಶದಲ್ಲಿ ಕುರಾನ್‌ ಸುಟ್ಟು ಹಾಕಿದ ಘಟನೆಯ ನಂತರ ಧಾರ್ಮಿಕ ದ್ವೇಷವನ್ನು ಹತ್ತಿಕ್ಕಲು ಪಾಕಿಸ್ತಾನ ಮಂಡಿಸಿದ ಕರಡು ನಿರ್ಣಯವನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಕೈಗೆತ್ತಿಕೊಂಡಿದೆ. ಈ ನಿರ್ಣಯದ ಪರ ಭಾರತ ಕೂಡ ಮತ ಚಲಾಯಿಸಿದೆ.

Update: 2023-07-12 14:41 GMT
Editor : Muad | Byline : ವಾರ್ತಾಭಾರತಿ

ಹೊಸದಿಲ್ಲಿ: ಸ್ವೀಡನ್‌ ದೇಶದಲ್ಲಿ ಕುರಾನ್‌ ಸುಟ್ಟು ಹಾಕಿದ ಘಟನೆಯ ನಂತರ ಧಾರ್ಮಿಕ ದ್ವೇಷವನ್ನು ಹತ್ತಿಕ್ಕಲು ಪಾಕಿಸ್ತಾನ ಮಂಡಿಸಿದ ಕರಡು ನಿರ್ಣಯವನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಕೈಗೆತ್ತಿಕೊಂಡಿದೆ. ಈ ನಿರ್ಣಯದ ಪರ ಭಾರತ ಕೂಡ ಮತ ಚಲಾಯಿಸಿದೆ.

ಜೂನ್‌ ತಿಂಗಳಿನಲ್ಲಿ ಕುರಾನ್‌ನ ಪ್ರತಿಯನ್ನು ಸ್ವೀಡನ್‌ ದೇಶದ ರಾಜಧಾನಿ ಸ್ಟಾಕ್‌ಹೋಂನ ಕೇಂದ್ರ ಮಸೀದಿಯ ಹೊರಗೆ ವ್ಯಕ್ತಿಯೊಬ್ಬ ಹರಿದು ಹಾಕಿ ಸುಟ್ಟು ಹಾಕಿದ್ದ. ಒಂದು ಜನಾಂಗ ಅಥವಾ ಗುಂಪಿನ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಆತನ ವಿರುದ್ಧ ಸ್ವೀಡನ್‌ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಘಟನೆಯನ್ನು 57 ದೇಶಗಳನ್ನೊಳಗೊಂಡ ಇಸ್ಲಾಮಿಕ್‌ ಸಹಕಾರ ಸಂಘಟನೆಯು ಕೂಡ ಕಟು ಶಬ್ದಗಳಲ್ಲಿ ಖಂಡಿಸಿತ್ತು

ಕೆಲ ಯುರೋಪಿಯನ್‌ ಮತ್ತು ಇತರ ದೇಶಗಳಲ್ಲಿ ಪವಿತ್ರ ಕುರಾನ್‌ ಅನ್ನು ಸಾರ್ವಜನಿಕವಾಗಿ ಸುಟ್ಟು ಹಾಕುವ ಪುನರಾವರ್ತಿತ ಘಟನೆಗಳನ್ನು ಖಂಡಿಸಿ ಇಸ್ಲಾಮಿಕ್‌ ಸಹಕಾರ ಸಂಘಟನೆಯ ಪರವಾಗಿ ಪಾಕಿಸ್ತಾನವು ಈ ಕರಡು ನಿರ್ಣಯವನ್ನು ಮಂಡಿಸಿತ್ತು.

ನಿರ್ಣಯವನ್ನು ಪಾಶ್ಚಿಮಾತ್ಯ ರಾಜತಾಂತ್ರಿಕರು ವಿರೋಧಿಸಿದ್ದರೂ ಮಾನವ ಹಕ್ಕುಗಳ ಮಂಡಳಿಯ 47 ಸದಸ್ಯರಲ್ಲಿ 19 ಇಸ್ಲಾಮಿಕ್‌ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳಿವೆ. ಚೀನಾ ಕೂಡ ಈ ನಿರ್ಣಯದ ಪರ ನಿಲುವು ಹಿಂದಿದೆ.

ಈ ನಿರ್ಣಯದ ವಿರುದ್ಧ ಅಮೆರಿಕಾ, ಇಂಗ್ಲೆಂಡ್‌, ಫ್ರಾನ್ಸ್‌, ಬೆಲ್ಜಿಯಂ, ಜರ್ಮನಿ, ರೊಮಾನಿಯಾ, ಲಿಥುವೇನಿಯಾ, ಕೋಸ್ಟರಿಕಾ ಮತ್ತು ಫಿನ್‌ಲ್ಯಾಂಡ್‌ ಮತ ಚಲಾಯಿಸಿವೆ.

ನೇಪಾಳ, ಪರಗುವೇ, ಜಾರ್ಜಿಯಾ, ಬೆನಿನ್‌, ಚಿಲಿ, ಹೊಂಡುರಾಸ್‌ ಮತ್ತು ಮೆಕ್ಸಿಕೋ ಮತದಾನದಿಂದ ಹೊರಗುಳಿದರೆ, ಭಾರತ ಸಹಿತ 28 ರಾಷ್ಟ್ರಗಳು ಅದರ ಪರ ಮತ ಚಲಾಯಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News