ತನ್ನ ಉಪಗ್ರಹದ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪವನ್ನು ಯುದ್ಧ ಘೋಷಣೆಯೆಂದು ಪರಿಗಣಿಸಲಾಗುವುದು: ಉತ್ತರ ಕೊರಿಯಾ ಎಚ್ಚರಿಕೆ

Update: 2023-12-02 16:54 GMT

Photo- PTI

ಪ್ಯೋಂಗ್ಯಾಂಗ್: ತನ್ನ ಉಪಗ್ರಹದ ಕಾರ್ಯಾಚರಣೆಯಲ್ಲಿ ಯಾವುದೇ ಹಸ್ತಕ್ಷೇಪವನ್ನು ಯುದ್ಧದ ಘೋಷಣೆಯೆಂದು ಪರಿಗಣಿಸಲಾಗುವುದು ಎಂದು ಉತ್ತರ ಕೊರಿಯಾ ಶನಿವಾರ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು ತನ್ನ ಕಾರ್ಯತಂತ್ರದ ಆಸ್ತಿಗಳ ವಿರುದ್ಧ ಯಾವುದೇ ದಾಳಿ ಸನ್ನಿಹಿತವಾಗಿದ್ದರೆ ಯುದ್ಧನಿರೋಧಕಗಳನ್ನು ಸಜ್ಜುಗೊಳಿಸಲಾಗುತ್ತದೆ ಎಂದಿದೆ.

`ಬಾಹ್ಯಾಕಾಶದಲ್ಲಿ ನಮ್ಮ ಯಾವುದೇ ಉಪಗ್ರಹದ ಕಾರ್ಯಾಚರಣೆಯಲ್ಲಿ ಅಮೆರಿಕ ಹಸ್ತಕ್ಷೇಪ ನಡೆಸಿದರೆ ಅದರ ಬೇಹುಗಾರಿಕೆ ಉಪಗ್ರಹದ ಕಾರ್ಯಸಾಧ್ಯತೆಯನ್ನು ತೊಡೆದುಹಾಕುತ್ತೇವೆ. ಸಾರ್ವಭೌಮ ರಾಷ್ಟ್ರವೊಂದರ ಕಾನೂನುಬದ್ಧ ಪ್ರದೇಶವನ್ನು ಅತ್ಯಾಧುನಿಕ ತಂತ್ರಜ್ಞಾನದ ಆಯುಧ ಬಳಸಿ ಅಕ್ರಮವಾಗಿ ಮತ್ತು ಅನ್ಯಾಯವಾಗಿ ಉಲ್ಲಂಘಿಸಲು ಅಮೆರಿಕ ಬಳಸಿದರೆ ಆತ್ಮರಕ್ಷಣೆಗಾಗಿ ಸೂಕ್ತ ಪ್ರತಿಕ್ರಿಯಾಶೀಲ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾವು ಪರಿಶೀಲಿಸುತ್ತೇವೆ' ಎಂದು ಉತ್ತರ ಕೊರಿಯಾ ರಕ್ಷಣಾ ಇಲಾಖೆಯ ವಕ್ತಾರರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ `ಕೆಸಿಎನ್ಎ' ವರದಿ ಮಾಡಿದೆ.

ನವೆಂಬರ್ 21ರಂದು ಉತ್ತರ ಕೊರಿಯಾ ಬೇಹುಗಾರಿಕೆ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತ್ತು. ಈ ಉಪಗ್ರಹವು ಅಮೆರಿಕದ ಹಲವು ಸೇನಾನೆಲೆಗಳ ಫೋಟೋವನ್ನು ರವಾನಿಸಿತ್ತು. ಇದಕ್ಕೆ ತೀವ್ರ ವಿರೋಧ ಸೂಚಿಸಿದ್ದ ಅಮೆರಿಕ ನವೆಂಬರ್ 30ರಂದು ಉತ್ತರ ಕೊರಿಯಾದ ವಿರುದ್ಧ ಹೊಸ ನಿರ್ಬಂಧ ಜಾರಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News