ಇರಾನ್ | ಬಸ್ಸು ಪಲ್ಟಿಯಾಗಿ 10 ಮಂದಿ ಮೃತ್ಯು

Update: 2024-09-17 15:35 GMT

ಸಾಂದರ್ಭಿಕ ಚಿತ್ರ

ಟೆಹ್ರಾನ್ : ಮಧ್ಯ ಇರಾನ್‍ನ ಯಾಝ್ದ್ ಪ್ರಾಂತದಲ್ಲಿ ಬಸ್ಸು ಅಪಘಾತದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು ಇತರ 41 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ.

ನೈಋತ್ಯ ಇರಾನ್‍ನ ಬುಶೆಹರ್ ಮತ್ತು ಈಶಾನ್ಯದಲ್ಲಿರುವ ಮಶಾದ್ ನಗರಗಳ ನಡುವೆ ಪ್ರಯಾಣಿಸುತ್ತಿದ್ದ ಬಸ್ಸು ಯಾಝ್ದ್ ಪ್ರಾಂತದ ಬಳಿಯ ಸಘಾಂದ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಬಸ್ಸಿನಲ್ಲಿ 52 ಪ್ರಯಾಣಿಕರಿದ್ದರು. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಹೇಳಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಮುಖ್ಯ ರಸ್ತೆಯ ಬದಿಗೆ ಸರಿದು ಪಲ್ಟಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಇರಾನ್‍ನ ಸಂಚಾರ ಪೊಲೀಸ್ ಮುಖ್ಯಸ್ಥ ಹಸನ್ ಮೊಮೆನಿಯನ್ನು ಉಲ್ಲೇಖಿಸಿ ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News