ಇರಾನ್ : ಜೂನ್ 28ರಂದು ಅಧ್ಯಕ್ಷೀಯ ಚುನಾವಣೆ

Update: 2024-06-26 16:17 GMT

PC : NDTV 

ಟೆಹ್ರಾನ್: ಕಳೆದ ತಿಂಗಳು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್‍ನ ಮಾಜಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧ್ಯಕ್ಷೀಯ ಚುನಾವಣೆ ಜೂನ್ 28ರಂದು ನಡೆಯಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಶುಕ್ರವಾರ ನಡೆಯಲಿರುವ ಚುನಾವಣೆಯಲ್ಲಿ ಐದು ಸಂಪ್ರದಾಯವಾದಿಗಳು ಮತ್ತು ಓರ್ವ ಸುಧಾರಣಾವಾದಿ ಅಭ್ಯರ್ಥಿ ಕಣದಲ್ಲಿದ್ದಾರೆ. 2020ರಿಂದ ಸಂಸತ್‍ನ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ ಮುಹಮ್ಮದ್ ಬಘೆರ್ ಘಲಿಬಾಫ್(62 ವರ್ಷ), ರೈಸಿ ಸರಕಾರದ ಕಟ್ಟಾ ಬೆಂಬಲಿಗ ಅಮೀರ್ ಹುಸೇನ್ ಘಝಿಝಾದೆ ಹಷೆಮಿ(53 ವರ್ಷ), ಸಯೀದ್ ಜಲೀಲಿ(58 ವರ್ಷ), ಮಾಜಿ ಆರೋಗ್ಯ ಸಚಿವ ಮಸೂದ್ ಪೆಜೆಶ್ಕಿಯಾನ್(69 ವರ್ಷ), ಮುಸ್ತಫಾ ಪೌರ್ಮೋಹಮ್ಮದಿ(64 ವರ್ಷ), 2021ರಿಂದ ಟೆಹ್ರಾನ್‍ನ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಲಿರೆಜಾ ಜಕಾನಿ (58 ವರ್ಷ) ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News