ಹೊಸ ವಸಾಹತು ಘಟಕಗಳಿಗೆ ಇಸ್ರೇಲ್ ಅನುಮೋದನೆ

Update: 2024-03-09 17:07 GMT

File Photo

ಟೆಲ್ಅವೀವ್ : ಆಕ್ರಮಿತ ಪಶ್ಚಿಮದಂಡೆಯಲ್ಲಿ ಸುಮಾರು 3,500 ಹೊಸ ವಸತಿ ಘಟಕಗಳನ್ನು ಸ್ಥಾಪಿಸಲು ಇಸ್ರೇಲ್ನ ವಸಾಹತು ಯೋಜನಾ ಪ್ರಾಧಿಕಾರ ಬುಧವಾರ ಅನುಮೋದನೆ ನೀಡಿದೆ. ಈ ಕ್ರಮಕ್ಕೆ ಇಸ್ರೇಲ್ನ ಮಿತ್ರರಾಷ್ಟ್ರಗಳು ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಈ ಮಧ್ಯೆ, ವೋಕರ್ ಟರ್ಕ್ ಅವರ ವರದಿಯನ್ನು ಟೀಕಿಸಿರುವ ವಿಶ್ವಸಂಸ್ಥೆಯಲ್ಲಿನ ಇಸ್ರೇಲ್ ಪ್ರತಿನಿಧಿ `ಇಸ್ರೇಲ್ ವಿರುದ್ಧ ಹಮಾಸ್ ನಡೆಸಿರುವ ಹಿಂಸಾಚಾರವನ್ನು ವರದಿ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕಳೆದ ವರ್ಷ ಫೆಲೆಸ್ತೀನಿನ ಭಯೋತ್ಪಾದನೆಯಿಂದ ಇಸ್ರೇಲ್ನ 36 ನಾಗರಿಕರು ಹತರಾಗಿದ್ದು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News