ಲೆಬನಾನ್ ಸೇನಾ ಕೇಂದ್ರದ ಮೇಲೆ ಇಸ್ರೇಲ್ ದಾಳಿ : ಒಬ್ಬ ಯೋಧ ಮೃತ್ಯು

Update: 2024-11-24 16:01 GMT

PC : PTI (ಸಾಂದರ್ಭಿಕ ಚಿತ್ರ)

ಬೈರೂತ್ : ಲೆಬನಾನ್ ಸೇನಾ ಕೇಂದ್ರದ ಮೇಲೆ ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟಿದ್ದು ಇತರ 18 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್ ಮಿಲಿಟರಿ ಹೇಳಿದೆ.

ನೈಋತ್ಯ ಲೆಬನಾನ್‌ ನಲ್ಲಿ ಟೈರ್ ಮತ್ತು ನಕೋರಾ ನಡುವಿನ ಕರಾವಳಿ ರಸ್ತೆ ಹಾಗೂ ಅಕ್ಕಪಕ್ಕದ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಶನಿವಾರ ಮಧ್ಯ ಬೈರೂತ್ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು ಇತರ 66 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್‌ ನ ಆರೋಗ್ಯ ಇಲಾಖೆ ಹೇಳಿದೆ.

ಇಸ್ರೇಲ್‍ ನ ದಾಳಿ ಅಮೆರಿಕ ನೇತೃತ್ವದಲ್ಲಿ ನಡೆಯುತ್ತಿರುವ ಕದನ ವಿರಾಮ ಪ್ರಯತ್ನದ ಮೇಲಿನ ಪ್ರಹಾರವಾಗಿದೆ. ಈ ನೇರ, ಮಾರಣಾಂತಿಕ ಪ್ರಹಾರವು ಕದನ ವಿರಾಮ ಪ್ರಯತ್ನವನ್ನು ತಿರಸ್ಕರಿಸುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದು ಕದನ ವಿರಾಮ ಪ್ರಸ್ತಾಪದ ಕುರಿತ ಮಾತುಕತೆಯನ್ನು ನಿರಾಕರಿಸುವ ಸಂದೇಶವನ್ನು ಇಸ್ರೇಲ್ ಮತ್ತೊಮ್ಮೆ ಲೆಬನಾನ್‌ ನ ರಕ್ತದಲ್ಲಿ ಬರೆದಿದೆ' ಎಂದು ಲೆಬನಾನ್‌ ನ ಹಂಗಾಮಿ ಪ್ರಧಾನಿ ನಜೀಬ್ ಮಿಕಾತಿ ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News