ನಿಜ್ಜಾರ್ ಹತ್ಯೆ | ಆರೋಪಿಗಳ ವಿಚಾರಣೆ ಬ್ರಿಟಿಷ್ ಕೊಲಂಬಿಯಾ ಸುಪ್ರೀಂಕೋರ್ಟ್‍ಗೆ ವರ್ಗಾವಣೆ
Update: 2024-11-24 15:49 GMT
ಒಟ್ಟಾವ : ಖಾಲಿಸ್ತಾನ್ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ನಾಲ್ವರು ಭಾರತೀಯರ ವಿಚಾರಣೆಯನ್ನು ಸರ್ರೆ ಪ್ರಾಂತೀಯ ನ್ಯಾಯಾಲಯದಿಂದ ಬ್ರಿಟಿಷ್ ಕೊಲಂಬಿಯಾ ಸುಪ್ರೀಂಕೋರ್ಟ್‍ಗೆ ವರ್ಗಾಯಿಸಿರುವುದಾಗಿ ವರದಿಯಾಗಿದೆ.
ಪ್ರಕರಣದ ವಿಚಾರಣೆಯನ್ನು ಸರ್ರೆ ಪ್ರಾಂತೀಯ ನ್ಯಾಯಾಲಯದಲ್ಲಿ ನಡೆಸುವುದಕ್ಕೆ ತಡೆಯಾಜ್ಞೆ ನೀಡಿ ಬ್ರಿಟಿಷ್ ಕೊಲಂಬಿಯಾ ಸುಪ್ರೀಂಕೋರ್ಟ್‍ಗೆ ವರ್ಗಾಯಿಸುವ ಮೂಲಕ ನೇರ ದೋಷಾರೋಪಣೆಗೆ ಅನುವು ಮಾಡಿಕೊಡುವಂತೆ ಕೋರಿ ಪ್ರಾಸಿಕ್ಯೂಷನ್ (ಫಿರ್ಯಾದಿ) ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲಾಗಿದೆ ಎಂದು ಅಟಾರ್ನಿ ಜನರಲ್ ಕಚೇರಿಯ ವಕ್ತಾರರನ್ನು ಉದ್ದೇಶಿಸಿ ಮಾಧ್ಯಮಗಳು ವರದಿ ಮಾಡಿವೆ.
ನೇರ ದೋಷಾರೋಪಣೆ ಎಂದರೆ ಆರೋಪಿಗಳ ಪ್ರಾಥಮಿಕ ವಿಚಾರಣೆ ನಡೆಸದೆ ನೇರ ವಿಚಾರಣೆ ನಡೆಸುವುದಾಗಿದೆ. ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಅಮನ್‍ದೀಪ್ ಸಿಂಗ್, ಕರಣ್ ಬ್ರಾರ್, ಕಮಲ್‍ಪ್ರೀತ್ ಸಿಂಗ್, ಕರಣ್‍ಪ್ರೀತ್ ಸಿಂಗ್ ಆರೋಪಿಗಳೆಂದು ಹೆಸರಿಸಲಾಗಿದೆ.