ಗಾಝಾ ಮೇಲೆ ಇಸ್ರೇಲ್ ವಾಯು ದಾಳಿ: ಹಮಾಸ್ ನಿಂದ ಒತ್ತೆಯಾಳುಗಳ ಹತ್ಯೆ ಬೆದರಿಕೆ
ಗಾಝಾ ಸಿಟಿ: ಗಾಝಾಪಟ್ಟಿಯ ನಿವಾಸಿಗಳಿಗೆ ಪೂರ್ವಸೂಚನೆ ನೀಡದೇ ಇಸ್ರೇಲ್ ಸೇನೆ ವಾಯುದಾಳಿ ನಡೆಸಿದಲ್ಲಿ ತಾನು ಸೆರೆಹಿಡಿದರುವ ಎಲ್ಲ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಹಮಾಸ್ ಸೋಮವಾರ ಎಚ್ಚರಿಕೆ ನೀಡಿದೆ.
"ಪೂರ್ವ ಮುನ್ಸೂಚನೆ ಇಲ್ಲದೇ ಮಾಡುವ ಪ್ರತಿಯೊಂದು ದಾಳಿಗೂ, ಒಬ್ಬರಂತೆ ಒತ್ತೆಯಾಳುಗಳನ್ನು ಹತ್ಯೆ ಮಾಡುವ ಮೂಲಕ ಪ್ರತೀಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ಹಮಾಸ್ ನ ಸಶಸ್ತ್ರ ವಿಭಾಗವಾದ ಎಝ್ಝೆಡೈನ್ ಅಲ್ ಕಾಸಿಂ ಬ್ರಿಗೇಡ್ಸ್ ಹೇಳಿಕೆ ನೀಡಿದೆ.
ದಕ್ಷಿಣ ಇಸ್ರೇಲ್ ಪಟ್ಟಣಗಳ ಮೇಲೆ ಹಮಾಸ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಗಾಝಾಪಟ್ಟಿಯ ಮೇಲೆ ಕಳೆದ ಮೂರು ದಿನಗಳಿಂದ ಇಸ್ರೇಲ್ ದಾಳಿ ನಡೆಸುತ್ತಿದೆ.
ಗಾಝಾಪಟ್ಟಿಯಿಂದ ಉಡಾಯಿಸಲಾದ ರಾಕೆಟ್ ಗಳ ಮೂಲಕ ನೂರಾರು ಗುಂಡುಗಳನ್ನು ಸಿಡಿಸಿರುವ ಹಮಾಸ್ ಹೋರಾಟಗಾರರು, ಸುಮಾರು 100 ಮಂದಿ ಒತ್ತೆಯಾಳುಗಳೊಂದಿಗೆ ವಾಪಸ್ಸಾಗಿದ್ದಾರೆ. ಸುಮಾರು 30 ಮಂದಿ ಒತ್ತೆಯಾಳುಗಳ ವಿವರಗಳನ್ನು ಅವರ ಕುಟುಂಬಗಳಿಗೆ ನೀಡಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.