ಜಪಾನ್ ಪ್ರವಾಹ | ಮೃತರ ಸಂಖ್ಯೆ 7ಕ್ಕೆ ಏರಿಕೆ

Update: 2024-09-23 15:29 GMT

PC : PTI

ಟೋಕಿಯೊ : ಮಧ್ಯ ಜಪಾನ್‍ನಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಮೃತರ ಸಂಖ್ಯೆ 7ಕ್ಕೆ ಏರಿದ್ದು 12 ಮಂದಿ ಗಾಯಗೊಂಡಿದ್ದಾರೆ. ಹಲವು ನದಿಗಳ ದಂಡೆಯಲ್ಲಿ ರಾಶಿಬಿದ್ದಿರುವ ತ್ಯಾಜ್ಯ, ಕಸಕಡ್ಡಿಗಳನ್ನು ತೆರವುಗೊಳಿಸುವ ಕಠಿಣ ಸವಾಲು ಎದುರಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನವರಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದ ಇನ್ನೂ ಚೇತರಿಸಿಕೊಳ್ಳದ ನೊಟೊ ಪರ್ಯಾಯ ದ್ವೀಪದ ನದಿ ವಾರಾಂತ್ಯದಲ್ಲಿ ಉಕ್ಕಿ ಹರಿದಿದ್ದು ಕೆಸರು ಮಿಶ್ರಿತ ನೀರು ರಸ್ತೆಗಳು ಹಾಗೂ ಸಮೀಪದ ಗ್ರಾಮಗಳನ್ನು ಮುಳುಗಿಸಿದೆ. ಸೋಮವಾರ ಮಳೆಯ ಅಬ್ಬರ ಕಡಿಮೆಯಾದ ಬಳಿಕ ಪೊಲೀಸರು, ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಕೈಜೋಡಿಸಿದರು. ಶನಿವಾರ ಮತ್ತು ರವಿವಾರ ನಿರಂತರ ಸುರಿದ ಮಳೆಯಿಂದಾಗಿ ವಜಿಮಾ ನಗರದಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಜನವರಿ 1ರಂದು ಸಂಭವಿಸಿದ್ದ ಭೂಕಂಪದಿಂದ ಸಂತ್ರಸ್ತರಾದವರಿಗೆ ಇಷಿಕಾವ ಪ್ರಾಂತದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮನೆಗಳಿಗೆ ನೆರೆನೀರು ನುಗ್ಗಿದೆ. ಕನಿಷ್ಠ 7 ಮಂದಿ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಇಷಿಕಾನ ಪ್ರಾದೇಶಿಕ ಸರಕಾರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News