ಹಿಜ್ಬುಲ್ಲಾಗಳ ನೆಲೆಯ ಬಳಿಯಿಂದ ದೂರ ಸರಿಯಿರಿ : ಲೆಬನಾನ್ ನಿವಾಸಿಗಳಿಗೆ ಇಸ್ರೇಲ್ ಸಲಹೆ

Update: 2024-09-23 14:44 GMT

pc : aljazeera.com

ಬೈರೂತ್ : ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ವಿರುದ್ಧ ಇನ್ನಷ್ಟು ವ್ಯಾಪಕ ಮತ್ತು ನಿಖರ ದಾಳಿ ನಡೆಸಲಾಗುವುದು. ಆದ್ದರಿಂದ ಹಿಜ್ಬುಲ್ಲಾಗಳ ನೆಲೆಯ ಬಳಿಯಿಂದ ದೂರ ಸರಿಯುವಂತೆ ಲೆಬನಾನ್ ನಿವಾಸಿಗಳಿಗೆ ಇಸ್ರೇಲ್ ಸೇನೆ ಸೋಮವಾರ ಸಲಹೆ ನೀಡಿದೆ.

ಹಿಜ್ಬುಲ್ಲಾಗಳು ಮಿಲಿಟರಿ ಕಾರಣಕ್ಕೆ, ಶಸ್ತ್ರಾಸ್ತ್ರಗಳ ದಾಸ್ತಾನಿಗೆ ಬಳಸುವ ಕಟ್ಟಡಗಳು ಮತ್ತು ಪ್ರದೇಶದ ಬಳಿಯಿರುವ ಗ್ರಾಮಗಳ ನಿವಾಸಿಗಳು ತಮ್ಮ ಸುರಕ್ಷೆಗಾಗಿ ತಕ್ಷಣ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸ್ಥಳೀಯ ನಿವಾಸಿಗಳಿಗೆ ಸಲಹೆ ನೀಡುತ್ತೇವೆ' ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಅಡ್ಮಿರಲ್ ಡೇನಿಯಲ್ ಹಗಾರಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News