ಜಪಾನ್ ನ ʼನಿಹಾನ್ ಹಿಡಾಂಕ್ಯೊʼ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

Update: 2024-10-11 09:26 GMT

Photo: X/@NobelPrize

ಹೊಸದಿಲ್ಲಿ: ನೊಬೆಲ್ ಸಮಿತಿಯು 2024ರ ನೊಬೆಲ್ ಶಾಂತಿ ಪ್ರಶಸ್ತಿಗೆ ಜಪಾನ್ ನ ʼನಿಹಾನ್ ಹಿಡಾಂಕ್ಯೊʼ ಸಂಸ್ಥೆಯನ್ನು ಆಯ್ಕೆ ಮಾಡಿದೆ.

ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರನ್ನು ಪ್ರತಿನಿಧಿಸುವ ಈ ಜಪಾನೀಸ್ ಸಂಸ್ಥೆಗೆ ಹಿಬಾಕುಶಾ ಎಂದು ಕೂಡ ಕರೆಯಲಾಗುತ್ತದೆ.

ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ನಿರ್ಮಿಸಲು ದಣಿವರಿಯದ ಪ್ರಯತ್ನಗಳಿಗಾಗಿ ಈ ಬಹುಮಾನವನ್ನು ನೀಡಲಾಗಿದೆ ಎಂದು ಸಮಿತಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News