ಲೆಬನಾನ್‍ | ಇಸ್ರೇಲ್ ದಾಳಿಯಲ್ಲಿ ವೈದ್ಯಕೀಯ ಸಿಬ್ಬಂದಿ ಮೃತ್ಯು

Update: 2024-10-26 17:07 GMT

PC : X

ಬೈರುತ್ : ದಕ್ಷಿಣ ಲೆಬನಾನ್‍ನಲ್ಲಿ ವೈದ್ಯಕೀಯ ಕೇಂದ್ರವೊಂದನ್ನು ಗುರಿಯಾಗಿಸಿ ಶನಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಸಂಯೋಜಿತ ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದು ಇತರ ಐದು ಮಂದಿ ಗಾಯಗೊಂಡಿರುವುದಾಗಿ ಲೆಬನಾನ್ ಆರೋಗ್ಯ ಇಲಾಖೆ ಹೇಳಿದೆ.

ಇದರೊಂದಿಗೆ ಕಳೆದ ವರ್ಷದಿಂದ ಹಿಜ್ಬುಲ್ಲಾ-ಇಸ್ರೇಲ್ ನಡುವೆ ಗಡಿಯಾಚೆಗಿನ ಗುಂಡಿನ ದಾಳಿ ಆರಂಭವಾದಂದಿನಿಂದ ಮೃತಪಟ್ಟ ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆ 164ಕ್ಕೇರಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ದಕ್ಷಿಣ ಲೆಬನಾನ್‍ ನ ಗ್ರಾಮವೊಂದರ ಬಳಿ ಇಸ್ರೇಲ್ ಪಡೆಗಳ ಮೇಲೆ ಸರಣಿ ರಾಕೆಟ್ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.

ದಕ್ಷಿಣ ಲೆಬನಾನ್ ಬಳಿಕ ಐತಾ ಅಲ್-ಶಾಬ್ ಗ್ರಾಮದಲ್ಲಿ ಭೂ ದಾಳಿ ಮುಂದುವರಿಸಿದ್ದ ಇಸ್ರೇಲ್‍ನ ಪದಾತಿ ದಳ ಹಾಗೂ ಟ್ಯಾಂಕ್‍ಗಳನ್ನು ಗುರಿಯಾಗಿಸಿ ಸರಣಿ ರಾಕೆಟ್ ದಾಳಿ ನಡೆದಿದ್ದು ಸಾವು-ನೋವಿನ ಬಗ್ಗೆ ಮಾಹಿತಿಯಿಲ್ಲ ಎಂದು ಹಿಜ್ಬುಲ್ಲಾ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News