ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರಾಗಿ ಯಾಹ್ಯ ಅಫ್ರಿದಿ ಪ್ರಮಾಣ ವಚನ

Update: 2024-10-27 16:30 GMT

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್ : ಪಾಕಿಸ್ತಾನದ 30ನೇ ಮುಖ್ಯ ನ್ಯಾಯಾಧೀಶರಾಗಿ(ಸಿಜೆ) ಯಾಹ್ಯ ಅಫ್ರಿದಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.

ಇಸ್ಲಾಮಾಬಾದ್ ನಲ್ಲಿ ಅಧ್ಯಕ್ಷರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಆಸಿಫ್ ಆಲಿ ನೂತನ ಸಿಜೆಗೆ ಪ್ರಮಾಣ ವಚನ ಬೋಧಿಸಿದರು. ತಮ್ಮ ಅಧಿಕಾರಾವಧಿಯನ್ನು ಪೂರೈಸಿದ ಬಳಿಕ ಶುಕ್ರವಾರ ನಿವೃತ್ತರಾದ ಜಸ್ಟಿಸ್ ಫಯೆಝ್ ಇಸಾ ಅವರ ಉತ್ತರಾಧಿಕಾರಿಯಾಗಿ ಅಫ್ರಿದಿ ನೇಮಕಗೊಂಡಿದ್ದಾರೆ.

ಪಾಕಿಸ್ತಾನದ ಸಂವಿಧಾನಕ್ಕೆ ಮಾಡಿರುವ ತಿದ್ದುಪಡಿ ಪ್ರಕಾರ ವಿಶೇಷ ಸಂಸದೀಯ ಸಮಿತಿಯು ಸುಪ್ರೀಂಕೋರ್ಟ್‍ನ ಮೂವರು ಹಿರಿಯ ನ್ಯಾಯಾಧೀಶರ ಪೈಕಿ ಅಫ್ರಿದಿಯವರ ಹೆಸರನ್ನು ಅನುಮೋದನೆ ಮಾಡಿದ ಬಳಿಕ ಪ್ರಧಾನಿ ಶಹಬಾಝ್ ಷರೀಫ್ ಈ ಶಿಫಾರಸನ್ನು ಅಧ್ಯಕ್ಷರಿಗೆ ರವಾನಿಸಿದ್ದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News