ಮೆಕ್ಸಿಕೋ: ನಿಲ್ಲಿಸಿದ್ದ ಕಾರಿನಲ್ಲಿ 7 ಮೃತದೇಹ ಪತ್ತೆ

Update: 2024-02-24 18:07 GMT

ಮೆಕ್ಸಿಕೋ ಸಿಟಿ: ಮೆಕ್ಸಿಕೋದ ವೆರಾಕ್ರಝ್ ರಾಜ್ಯದ ಅಕುಲ್ಟಿಂಗೊ ನಗರದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಸ್ಥಿತಿಯಲ್ಲಿದ್ದ ಕಾರಿನಲ್ಲಿ ಇಬ್ಬರು ಮಹಿಳೆಯರು, ಓರ್ವ ಬಾಲಕನ ಸಹಿತ 7 ಮಂದಿಯ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಮೃತದೇಹಗಳಲ್ಲಿ ಹಲವು ಗುಂಡೇಟಿನ ಗುರುತುಗಳು ಕಂಡು ಬಂದಿವೆ. ಈ ಪ್ರದೇಶದಲ್ಲಿ ಹಲವು ಕ್ರಿಮಿನಲ್ ಗ್ಯಾಂಗ್‍ಗಳ ನಡುವೆ ಹಿಂಸಾಚಾರ, ಘರ್ಷಣೆ ಹೆಚ್ಚಿದೆ. ಮಾದಕ ವಸ್ತು ಸಾಗಾಟ, ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ದರೋಡೆ ಮಾಡುವುದು ಇತ್ಯಾದಿ ದುಷ್ಕೃತ್ಯ ನಡೆಸುತ್ತಿರುವ ಕ್ರಿಮಿನಲ್ ಗ್ಯಾಂಗ್‍ಗಳ ಕೃತ್ಯ ಇದಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News