ಜಾರ್ಜಿಯಾ ಅಧ್ಯಕ್ಷರಾಗಿ ಮಾಜಿ ಫುಟ್ ಬಾಲ್ ಆಟಗಾರ ಮೈಕೇಲ್ ಕವೆಲಶ್ವಿಲಿ ಪ್ರಮಾಣ ವಚನ ಸ್ವೀಕಾರ
Update: 2024-12-29 15:54 GMT
ತ್ಬಿಲಿಸಿ: ಮಾಜಿ ಫುಟ್ ಬಾಲ್ ಆಟಗಾರ ಮೈಕೇಲ್ ಕವೆಲಶ್ವಿಲಿ ಜಾರ್ಜಿಯಾದ ನೂತನ ಅಧ್ಯಕ್ಷರಾಗಿ ರವಿವಾರ ಪ್ರಮಾಣ ವಚನ ಸ್ವೀಕರಿಸಿದರು.
ಮೈಕೇಲ್ ಕವೆಲಿಶ್ವಿಲಿ ಆಯ್ಕೆ ಅನೈತಿಕ ಎಂದು ಅಧಿಕಾರದಿಂದ ನಿರ್ಗಮಿಸುತ್ತಿರುವ ನಾಯಕಿ ಹಾಗೂ ವಿರೋಧ ಪಕ್ಷಗಳ ಗುಂಪುಗಳು ಆರೋಪಿಸಿದ್ದರೂ, ಆಡಳಿತಾರೂಢ ಪಕ್ಷದ ಅನುಯಾಯಿ ಮೈಕೇಲ್ ಕವೆಲಶ್ವಿಲಿಯನ್ನು ಜಾರ್ಜಿಯಾದ ನೂತನ ಅಧ್ಯಿಕ್ಷರನ್ನಾಗಿ ಘೋಷಿಸಲಾಯಿತು.
ನಾನು ಮಾತ್ರ ನ್ಯಾಯಬದ್ಧ ಅಧ್ಯಕ್ಷೆಯಾಗಿದ್ದು, ಸಂಸತ್ತನ್ನು ನಿಯಂತ್ರಿಸುವ ಜಾರ್ಜಿಯಾದ ಡ್ರೀಮ್ ಪಕ್ಷದ ವಿರುದ್ಧ ಹೋರಾಡುವುದಾಗಿ ನಿರ್ಗಮಿತ ಅಧ್ಯಕ್ಷೆ ಸಲೋಮ್ ಝುರಬಿಶ್ವಿಲಿ ಪ್ರತಿಜ್ಞೆ ಮಾಡಿದ ಬೆನ್ನಿಗೇ, ಸಂಸದೀಯ ಸಮಾರಂಭವೊಂದರಲ್ಲಿ ತೀವ್ರ ಬಲಪಂಥೀಯ ಹಾಗೂ ಮಾಜಿ ಫುಟ್ ಬಾಲ್ ಆಟಗಾರ ಮೈಕೇಲ್ ಕವೆಲಶ್ವಿಲಿ ಜಾರ್ಜಿಯಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.