ಮಿಲಿಟರಿ ಗುಪ್ತಚರ ಮಾಹಿತಿ ಹಂಚಿಕೆ : ಅಮೆರಿಕ, ಫಿಲಿಪ್ಪೀನ್ಸ್ ಒಪ್ಪಂದ

Update: 2024-11-19 16:55 GMT

ಲಾಯ್ಡ್ ಆಸ್ಟಿನ್ ಮತ್ತು ಫಿಲಿಪ್ಪೀನ್ಸ್  , ಗಿಲ್ಬರ್ಟೋ ಟಿಯೊಡೊರೊ | PC  :AP

ಮನಿಲಾ : ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಸಾಮಾನ್ಯ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಎರಡು ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸುವ ಮಿಲಿಟರಿ ಗುಪ್ತಚರ ಮಾಹಿತಿ ಹಂಚಿಕೆ ಒಪ್ಪಂದಕ್ಕೆ ಅಮೆರಿಕ ಮತ್ತು ಫಿಲಿಪ್ಪೀನ್ಸ್ ಸಹಿ ಹಾಕಿವೆ.

ಫಿಲಿಪ್ಪೀನ್ಸ್‍ಗೆ ಭೇಟಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಫಿಲಿಪ್ಪೀನ್ಸ್ ರಕ್ಷಣಾ ಸಚಿವ ಗಿಲ್ಬರ್ಟೋ ಟಿಯೊಡೊರೊ ಮನಿಲಾದ ಮಿಲಿಟರಿ ಕೇಂದ್ರ ಕಚೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದೇ ಸಂದರ್ಭ ಎರಡೂ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಸಹಯೋಗವನ್ನು ಸುಲಭಗೊಳಿಸುವ ಸಂಯೋಜಿತ ಸಮನ್ವಯ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮವೂ ಇದೇ ಸಂದರ್ಭ ನಡೆಯಿತು.

ಈ ಒಪ್ಪಂದವು ಎರಡೂ ದೇಶಗಳಿಗೆ ವರ್ಗೀಕೃತ ಮಿಲಿಟರಿ ಮಾಹಿತಿಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಅಮೆರಿಕದಿಂದ ಉನ್ನತ ತಂತ್ರಜ್ಞಾನ, ಅತ್ಯಾಧುನಿಕ ವಸ್ತುಗಳನ್ನು ಪಡೆಯಲು ಅವಕಾಶ ನೀಡುವ ಜತೆಗೆ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಇದೇ ರೀತಿಯ ಒಪ್ಪಂದವನ್ನು ಮುಂದುವರಿಸಲು ಅವಕಾಶಗಳನ್ನು ತೆರೆಯುತ್ತದೆ' ಎಂದು ಫಿಲಿಪ್ಪೀನ್ಸ್ ರಕ್ಷಣಾ ಇಲಾಖೆಯ ವಕ್ತಾರ ಅರ್ಸೇನಿಯೊ ಅಂಡೊಲೊಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News