ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ ಬಲಪಡಿಸಲು ಭಾರತ-ಇಟಲಿ ನಿರ್ಧಾರ

Update: 2024-11-19 16:41 GMT

 ಜಾರ್ಜಿಯಾ ಮೆಲೋನಿ , ನರೇಂದ್ರ ಮೋದಿ |  PC : PTI

ರಿಯೊ ಡಿ ಜನೈರೊ : ಬ್ರೆಝಿಲ್‍ನಲ್ಲಿ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಸಭೆಯಲ್ಲಿ ಭಾರತ-ಇಟಲಿ ಜಂಟಿ ಕಾರ್ಯತಂತ್ರದ ಯೋಜನೆ 2025-29ನ್ನು ಬಲಪಡಿಸಲು ಉಭಯ ನಾಯಕರು ನಿರ್ಧರಿಸಿದರು. ಭಾರತ ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಮತ್ತು ಭಾರತ-ಪೆಸಿಫಿಕ್ ಸಾಗರ ಉಪಕ್ರಮದಲ್ಲಿ ಸಹಕಾರ ವರ್ಧನೆ, ವಲಸೆ ಮತ್ತು ಚಲನಶೀಲತೆಯ ಬಗ್ಗೆ ಕಾರ್ಯ ನಿರ್ವಹಿಸಲು, ಉದ್ಯಮ 4.0ಗಾಗಿ ಪರಸ್ಪರ ಕ್ರಿಯೆಗಳನ್ನು ಹೆಚ್ಚಿಸಿ ಮತ್ತು 2025-27 ಅವಧಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರಕ್ಕಾಗಿ ಕಾರ್ಯಕಾರಿ ಯೋಜನೆ ಜಾರಿಗೊಳಿಸುವ ಬಗ್ಗೆ ನಿರ್ಧರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News