ಬ್ರಿಟಿಷ್ ಕೊಲಂಬಿಯಾದ ಡೆಪ್ಯುಟಿ ಪ್ರೀಮಿಯರ್ ಆಗಿ ನಿಕಿ ಶರ್ಮ ನೇಮಕ
Update: 2024-11-19 17:06 GMT
ಟೊರಂಟೊ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಡೆಪ್ಯುಟಿ ಪ್ರೀಮಿಯರ್ ಆಗಿ ಭಾರತೀಯ ಕೆನಡಿಯನ್ ನಿಕಿ ಶರ್ಮ ನೇಮಕಗೊಂಡಿರುವುದಾಗಿ ವರದಿಯಾಗಿದೆ.
ಬ್ರಿಟಿಷ್ ಕೊಲಂಬಿಯಾದ ಪ್ರೀಮಿಯರ್(ಭಾರತದ ರಾಜ್ಯಗಳಲ್ಲಿ ಮುಖ್ಯಮಂತ್ರಿಯ ಹುದ್ದೆ) ಡೇವಿಡ್ ಎಬಿ ಸೋಮವಾರ ಸಚಿವ ಸಂಪುಟವನ್ನು ಘೋಷಿಸಿದ್ದಾರೆ. ಈ ಹಿಂದಿನ ಸರಕಾರದಲ್ಲಿ ಅಟಾರ್ನಿ ಜನರಲ್ ಆಗಿದ್ದ ನಿಕಿ ಶರ್ಮ ಆ ಹುದ್ದೆಯಲ್ಲಿ ಮುಂದುವರಿಯುವ ಜತೆಗೆ ಡೆಪ್ಯುಟಿ ಪ್ರೀಮಿಯರ್ ಆಗಿಯೂ ಭಡ್ತಿ ಪಡೆದಿದ್ದಾರೆ. ಬ್ರಿಟಿಷ್ ಕೊಲಂಬಿಯಾ ವಿಧಾನಸಭೆಗೆ ಆಯ್ಕೆಗೊಂಡಿರುವ ಭಾರತೀಯ ಕೆನಡಿಯನ್ ಸಮುದಾಯದ ಇತರ ಮೂವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ. ರವಿ ಪರ್ಮಾರ್‍ಗೆ ಅರಣ್ಯ ಇಲಾಖೆ, ಜಗ್‍ರೂಪ್ ಬ್ರಾರ್ ಗೆ ಗಣಿ ಮತ್ತು ಖನಿಜ ಸಂಪನ್ಮೂಲ, ರವಿ ಕಹ್ಲಾನ್‍ಗೆ ವಸತಿ ಮತ್ತು ಪುರಸಭೆ ವ್ಯವಹಾರ ಇಲಾಖೆಯ ಸಚಿವ ಸ್ಥಾನ ನೀಡಲಾಗಿದೆ.