ಕ್ಷಿಪಣಿ ಕಾರ್ಯಾಚರಣೆ ನಿಲ್ಲುವುದಿಲ್ಲ : ಇರಾನ್
Update: 2024-09-17 16:46 GMT
ಟೆಹ್ರಾನ್ : ಇರಾನ್ ತನ್ನ ಕ್ಷಿಪಣಿ ಕಾರ್ಯಾಚರಣೆ ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ.
ನಮ್ಮ ಬದ್ಧ ವೈರಿ ಇಸ್ರೇಲ್ ಗಾಝಾದ ಮೇಲೆ ಪ್ರತೀ ದಿನ ಕ್ಷಿಪಣಿಗಳನ್ನು ಉಡಾಯಿಸಲು ಸಾಧ್ಯವಿರುವ ಪ್ರದೇಶದಲ್ಲಿ ನಮ್ಮ ಭದ್ರತೆಗಾಗಿ ಇಂತಹ ಪ್ರತಿರೋಧದ ಅಗತ್ಯವಿದೆ ಎಂದವರು ಹೇಳಿದ್ದಾರೆ. ಕ್ಷಿಪಣಿ ಕಾರ್ಯಾಚರಣೆಯನ್ನು ಸೀಮಿತಗೊಳಿಸಬೇಕು ಎಂಬ ಪಾಶ್ಚಿಮಾತ್ಯರ ಆಗ್ರಹವನ್ನು ಇರಾನ್ ತಿರಸ್ಕರಿಸುತ್ತಾ ಬಂದಿದೆ.
`ಒಂದು ವೇಳೆ ನಮ್ಮಲ್ಲಿ ಕ್ಷಿಪಣಿಗಳಿಲ್ಲದಿದ್ದರೆ ಅವರು ಗಾಝಾದಂತೆ, ತಮಗೆ ಇಷ್ಟ ಬಂದ ಹಾಗೆ ನಮ್ಮ ಮೇಲೆ ಬಾಂಬ್ ಹಾಕಬಹುದು' ಎಂದ ಅವರು ಮೊದಲು ಇಸ್ರೇಲ್‍ನ ನಿರಸ್ತ್ರೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದರು.