ಶ್ವೇತಭವನದ ಇಫ್ತಾರ್ ಔತಣಕೂಟ ಆಹ್ವಾನ ತಿರಸ್ಕರಿಸಿದ ಮುಸ್ಲಿಮರು
Update: 2024-04-04 18:06 GMT
ವಾಷಿಂಗ್ಟನ್: ಗಾಝಾ ಯುದ್ಧದಲ್ಲಿ ಇಸ್ರೇಲ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಆಡಳಿತದ ಬೆಂಬಲದ ಬಗ್ಗೆ ಅಸಮಾಧಾನಗೊಂಡಿರುವ ಅಮೆರಿಕದಲ್ಲಿರುವ ಮುಸ್ಲಿಮ್ ಸಮುದಾಯದ ಸದಸ್ಯರು ಪವಿತ್ರ ರಮಝಾನ್ ಮಾಸದ ಸಂದರ್ಭ ಶ್ವೇತಭವನದ ಇಫ್ತಾರ್ ಔತಣಕೂಟದ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ವರದಿಯಾಗಿದೆ.
ಗಾಝಾದಲ್ಲಿ ಇಸ್ರೇಲ್ನ ಯುದ್ಧಕ್ಕೆ ಅಧ್ಯಕ್ಷ ಬೈಡನ್ ಅವರ ಬೆಂಬಲದ ಬಗ್ಗೆ ಅನೇಕ ಆಹ್ವಾನಿತರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಔತಣಕೂಟಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.