ನಾಯ್ಕ್ ಧನಂಜಯ್ ಸಿಂಗ್ ಗೆ ವಿಶ್ವಸಂಸ್ಥೆಯ ಮರಣೋತ್ತರ ಗೌರವ
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಧ್ವಜದಡಿ ಕರ್ತವ್ಯದಲ್ಲಿದ್ದ ಸಂದರ್ಭ ಅತ್ಯುನ್ನತ ಸೇವೆ ಮತ್ತು ಬಲಿದಾನ ಮಾಡಿದ ಯೋಧರಿಗೆ ನೀಡಲಾಗುವ ಪ್ರತಿಷ್ಠಿತ ಡ್ಯಾಗ್ ಹ್ಯಾಮಸ್ರ್ಕ್ಜೋಲ್ಡ್ ಪದಕವನ್ನು ಭಾರತದ ಯೋಧ ನಾಯ್ಕ್ ಧನಂಜಯ್ ಸಿಂಗ್ಗೆ ಗುರುವಾರ ಮರಣೋತ್ತರವಾಗಿ ಪ್ರದಾನ ಮಾಡಲಾಗಿದೆ.
ಕಾಂಗೋ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗದಲ್ಲಿ 2023ರ ಜುಲೈ 7ರಂದು ಸೇರ್ಪಡೆಗೊಂಡಿದ್ದರು. ಸೇನೆಯ ವೈದ್ಯಕೀಯ ವಿಭಾಗದಲ್ಲಿದ್ದ ಸಿಂಗ್ ಯುದ್ಧರಂಗದಲ್ಲಿ ಗಾಯಗೊಳ್ಳುವ ಯೋಧರಿಗೆ ಪ್ರಥಮ ಚಿಕಿತ್ಸೆ ಒದಗಿಸುವ, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಕಾರ್ಯ ನಿರ್ವಹಿಸಿದ್ದರು. 2023ರ ನವೆಂಬರ್ 1ರಿಂದ ಹೃದಯ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಸಿಂಗ್ ಮೃತಪಟ್ಟಿದ್ದರು. ಮರಣೋತ್ತರ ಗೌರವದ ಪದಕವನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಗುರುವಾರ ಹಸ್ತಾಂತರಿಸಿದರು.